ಕನ್ನಡ ಸುದ್ದಿ  /  ಜೀವನಶೈಲಿ  /  Summer Tips: ಬೇಸಿಗೆಯಲ್ಲಿ ಸನ್‌ಗ್ಲಾಸ್‌ ಧರಿಸುವುದು ಕಣ್ಣಿಗೆ ಅಪಾಯವೇ? ಈ ಬಗ್ಗೆ ತಜ್ಞರು ಏನಂತಾರೆ ನೋಡಿ

Summer Tips: ಬೇಸಿಗೆಯಲ್ಲಿ ಸನ್‌ಗ್ಲಾಸ್‌ ಧರಿಸುವುದು ಕಣ್ಣಿಗೆ ಅಪಾಯವೇ? ಈ ಬಗ್ಗೆ ತಜ್ಞರು ಏನಂತಾರೆ ನೋಡಿ

ಬೇಸಿಗೆಯ ದಿನಗಳಲ್ಲಿ ಕಣ್ಣುಗಳ ರಕ್ಷಣೆಗೆ ಸನ್‌ಗ್ಲಾಸ್‌ ಧರಿಸುವುದು ಸಹಜ. ಆದರೆ ನಿರಂತರ ಸನ್‌ಗ್ಲಾಸ್‌ ಬಳಸುವುದರಿಂದ ಗಂಭೀರ ಕಣ್ಣಿನ ಸಮಸ್ಯೆಗಳು ಎದುರಾಗಬಹುದು ಎನ್ನುತ್ತಾರೆ. ಹಾಗಾದರೆ ಈ ಬಗ್ಗೆ ತಜ್ಞರು ಏನಂತಾರೆ ನೋಡಿ.

ಬೇಸಿಗೆಯಲ್ಲಿ ಸನ್‌ಗ್ಲಾಸ್‌ ಧರಿಸುವುದು ಕಣ್ಣಿಗೆ  ಅಪಾಯವೇ? ಈ ಬಗ್ಗೆ ತಜ್ಞರು ಏನಂತಾರೆ ನೋಡಿ
ಬೇಸಿಗೆಯಲ್ಲಿ ಸನ್‌ಗ್ಲಾಸ್‌ ಧರಿಸುವುದು ಕಣ್ಣಿಗೆ ಅಪಾಯವೇ? ಈ ಬಗ್ಗೆ ತಜ್ಞರು ಏನಂತಾರೆ ನೋಡಿ

ಬೇಸಿಗೆ ಕಾಲ ಬಂತೆಂದರೆ ಸೂರ್ಯನ ಕಿರಣಗಳಿಂದ ದೇಹದ ಅಂಗಾಂಗಗಳನ್ನು ರಕ್ಷಿಸಿಕೊಳ್ಳಲು ಪ್ಲಾನ್‌ ಮಾಡುತ್ತೇವೆ. ಬೇಸಿಗೆಯಲ್ಲಿ ಸೂರ್ಯನ ತಾಪಮಾನದಿಂದ ಕಣ್ಣುಗಳ ರಕ್ಷಣೆಗೆ ಸನ್‌ಗ್ಲಾಸ್‌ ಧರಿಸುವುದು ಸಾಮಾನ್ಯ. ಆದರೆ ಸನ್‌ಗ್ಲಾಸ್‌ ಧರಿಸುವುದರಿಂದ ಕಣ್ಣುಗಳಿಗೆ ಹಾನಿಯಾಗುತ್ತದೆ ಎಂಬ ಅಂಶವೊಂದು ಇತ್ತೀಚಿಗೆ ಸದ್ದು ಮಾಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ʼಸನ್‌ಗ್ಲಾಸ್‌ಗಳು ನಿಮ್ಮ ಕಣ್ಣುಗಳನ್ನು ರಕ್ಷಿಸುವುದಿಲ್ಲ. ಬದಲಾಗಿ ಅವು ಕಣ್ಣುಗಳಿಗೆ ಹಾನಿ ಮಾಡುತ್ತವೆʼ ಎಂದು ಡಿಜಿಟಲ್‌ ಕಂಟೆಂಟ್‌ ಕ್ರಿಯೇಟರ್‌ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅವರ ಪ್ರಕಾರ ನಮ್ಮ ಕಣ್ಣುಗಳು ಮೈಟೊಕಾಂಡ್ರಿಯಾದ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುತ್ತವೆ.

ʼಸನ್‌ಗ್ಲಾಸ್‌ಗಳು ಸೂರ್ಯನ ಬೆಳಕನ್ನು ನಿರ್ಬಂಧಿಸುತ್ತದೆ. ಆದರೆ ಕಣ್ಣಿನ ಮೈಟೋಕಾಂಡ್ರಿಯಾಕ್ಕೆ ಸೂರ್ಯನ ಬೆಳಕು ಅವಶ್ಯ. ಸೂರ್ಯನ ಬೆಳಕನ್ನು ಕಣ್ಣಿನಿಂದ ನಿರ್ಬಂಧಿಸುವುದರಿಂದ ಮ್ಯಾಕ್ಯುಲರ್ ಡಿಜೆನರೇಶನ್, ಸಮೀಪದೃಷ್ಟಿ ಮತ್ತು ಗ್ಲುಕೋಮಾದಂತಹ ಗಂಭೀರ ಸಮಸ್ಯೆಗಳು ಎದುರಾಗಬಹುದು ಎಂದು ಅವರು ಬರೆದುಕೊಂಡಿದ್ದರು.

ಡಿಜಿಟಲ್‌ ಕಂಟೆಂಟ್‌ ಕ್ರಿಯೇಟರ್‌ ಹೇಳಿದ್ದು ಸತ್ಯವೇ?

ಬೆಂಗಳೂರಿನ ಆತ್ರೇಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ನೇತತಜ್ಞರಾದ ಡಾ. ನವ್ಯಾ ಸಿ ಅವರ ಪ್ರಕಾರ ʼಸನ್‌ಗ್ಲಾಸ್‌ಗಳು ಪ್ರಾಥಮಿಕವಾಗಿ ಹಾನಿಕಾರಕ ಯುವಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತವೆ. ಈ ಯುವಿ ಕಿರಣಗಳು ನೇರವಾಗಿ ಕಣ್ಣಿನ ಮೇಲೆ ಬೀಳುವುದರಿಂದ ಕಣ್ಣಿನ ಪೊರೆ, ಮ್ಯಾಕ್ಯಲರ್‌ ಡಿಜೆನರೇಶನ್‌ ಮತ್ತು ಪ್ಯಾಟರಿಜಿಯನಂತಹ ಸಮಸ್ಯೆಗಳು ಎದುರಾಗಬಹುದುʼ ಎನ್ನುತ್ತಾರೆ.

ಆದರೆ ಸನ್‌ಗ್ಲಾಸ್‌ ಧರಿಸುವುದರಿಂದ ಕಣ್ಣಿಗೆ ಅಗತ್ಯವಿರುವ ಸೂರ್ಯನ ಬೆಳಕಿಗೆ ಅಡ್ಡಿಯಾಗುತ್ತದೆ. ಇದು ಕೂಡ ತೊಂದರೆ ಉಂಟು ಮಾಡಬಹುದು. ಹಾಗಾಗಿ ಈ ಎರಡಕ್ಕೂ ಹೊಂದುವಂತಹ ಗ್ಲಾಸ್‌ ಧರಿಸಬೇಕು. ಜರ್ನಲ್‌ ಆಫ್‌ ಆಪ್ತಮಾಲಜಿ ಅಲ್ಲಿ ಪ್ರಕಟವಾದ ಅಧ್ಯಯನಗಳು ಸೇರಿದಂತೆ ವೈಜ್ಞಾನಿಕ ಸಂಶೋಧನೆಯು ಕಣ್ಣಿನ ಮೇಲ್ಮೈ ಮತ್ತು ಆತಂರಿಕ ರಚನೆಗಳಿಗೆ ಹಾನಿಯಾಗದಂತೆ ತಡೆಯುವ ಸನ್‌ಗ್ಲಾಸ್‌ ಬಳಕೆಯನ್ನು ಬೆಂಬಲಿಸುತ್ತದೆʼ ಎಂದು ಅವರು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೃತಕ ಬೆಳಕಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದಾಗುವ ಅಪಾಯಗಳು

ದೀರ್ಘಕಾಲದವರೆಗೆ ಕೃತಕ ಬೆಳಕಿನ ಮೂಲಗಳಿಗೆ ಒಡ್ಡಿಕೊಳ್ಳುವುದರಿಂದ ನಿರ್ದಿಷ್ಟವಾಗಿ ಡಿಜಿಟಲ್‌ ಸಾಧನಗಳಿಂದ ಹೊರ ಸೂಸುವ ನೀಲಿ ಬೆಳಕು, ಕಣ್ಣಿನ ಒತ್ತಡಕ್ಕೆ ಕಾರಣವಾಗಬಹುದು. ಇದು ಕಾಲಾನಂತರದಲ್ಲಿ ಮ್ಯಾಕ್ಯುಲರ್‌ ಹಾನಿಯ ಅಪಾಯವನ್ನು ಹೆಚ್ಚಿಸಬಹುದು.

ಅಮೆರಿಕನ್‌ ಜರ್ನಲ್‌ ಆಫ್‌ ಆಪ್ತಮಾಲಜಿ ಸಂಶೋಧನೆಯ ಸೂಚನೆಯಂತೆ ಅತಿಯಾದ ಕೃತಕ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸುವುದು ಬಹಳ ಮುಖ್ಯ. ಬ್ಲೂ ರೇಸ್‌ ಅಥವಾ ನೀಲಿ ಬೆಳಕಿನ ಫಿಲ್ಟರ್‌ ಇರುವ ಕನ್ನಡಕ ಬಳಸುವುದು ಉತ್ತಮ. ಆಗಾಗ ಸ್ಕ್ರೀನ್‌ನಿಂದ ಬ್ರೇಕ್‌ ಪಡೆಯುವುದು ಬಹಳ ಮುಖ್ಯ. ಇದರಿಂದ ತೊಂದರೆಗಳಿಂದ ಕಣ್ಣುಗಳನ್ನು ರಕ್ಷಿಸಬಹುದು, ಇದು ಅಪಾಯಗಳ ನಿವಾರಣೆಗೂ ಉತ್ತಮ ಎಂದು ಡಾ. ನವ್ಯಾ ಹೇಳುತ್ತಾರೆ.

ದೊಡ್ಡ ಸನ್‌ಗ್ಲಾಸ್‌ ಮತ್ತು ಚಿಕ್ಕ ಸನ್‌ಗ್ಲಾಸ್‌ನ ಪ್ರಯೋಜನಗಳು

ಸೂರ್ಯನ ಬೆಳಕನ್ನು ಕಣ್ಣಿಗಳಿಗೆ ತಲುಪಿಸಲು ಅನುಮತಿ ನೀಡುವ ಚಿಕ್ಕ ಸನ್‌ಗ್ಲಾಸ್‌ಗಳು ಹೆಚ್ಚು ಪ್ರಯೋಜನಕಾರಿ ಎಂಬ ಕಲ್ಪನೆಯು ವಿವಾದಾಸ್ಪದʼ ಎಂದು ಡಾ. ನವ್ಯಾ ಬಹಿರಂಗ ಪಡಿಸುತ್ತಾರೆ.

ವಿಟಮಿನ್‌ ಡಿ ಸಂಶ್ಲೇಷಣೆಗೆ ಸ್ವಲ್ಪ ಮಟ್ಟಿಗೆ ಯುವಿ ಕಿರಣಗಳು ಅವಶ್ಯ ಎಂಬುದು ನಿಜವಾದ್ರೂ ಕಣ್ಣಿಗೆ ಯುವಿ ಕಿರಣಗಳ ಹಾನಿಯು ಇದಕ್ಕಿಂತ ಹೆಚ್ಚು ಎಂದು ಅವರು ಹೇಳುತ್ತಾರೆ. ನೇತ್ರತಜ್ಞರ ಪ್ರಕಾರ ಯುವಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುವ ದೊಡ್ಡ ಸನ್‌ಗ್ಲಾಸ್‌ಗಳು ಕಣ್ಣಿಗೆ ಉತ್ತಮ.

ಅತಿ ಹೆಚ್ಚು ಸೂರ್ಯನ ಬೆಳಕು ಹೊಂದಿರುವ ಪ್ರದೇಶಗಳಲ್ಲಿ ಕಣ್ಣಿನ ರಕ್ಷಣೆ

ಭಾರತದ ಹಲವು ಭಾಗಗಳಲ್ಲಿ ಸೂರ್ಯ ತೀವ್ರ ಬೆಳಕು ಇರುತ್ತದೆ, ಅಂತಹ ಕಡೆಗಳಲ್ಲಿ ಕಣ್ಣುಗಳನ್ನು ಯುವಿ ಕಿರಣಗಳಿಂದ ರಕ್ಷಿಸಿಕೊಳ್ಳುವುದು ಬಹಳ ಮುಖ್ಯು. ಶೇ 99 ರಿಂದ ಶೇ 100 ರಷ್ಟು ಯುವಿಎ ಹಾಗೂ ಯುವಿಬಿ ಕಿರಣಗಳನ್ನು ನಿರ್ಬಂಧಿಸುವ ಅಗಲವಾದ ಸ್ಪೆಕ್ಟ್ರಮ್‌ ಯುವಿ ಪ್ರೊಟೆಕ್ಷನ್‌ ಇರುವ ಸನ್‌ಗ್ಲಾಸ್‌ ಧರಿಸಬೇಕು ಎಂದು ನೇತ್ರತಜ್ಞರು ಸಲಹೆ ನೀಡುತ್ತಾರೆ.

ಒಟ್ಟಾರೆ ದೇಹದ ಆರೋಗ್ಯ ಹಾಗೂ ವಿಟಮಿನ್‌ ಡಿ ಸಂಶ್ಲೇಷಣೆಗಾಗಿ ದೇಹದ ಕೆಲವು ಭಾಗಗಳಿಗೆ ಮಧ್ಯಮ ಸೂರ್ಯನ ಬೆಳಕು ಅವಶ್ಯ. ಆದರೆ ಬಾಹ್ಯ ದೃಷ್ಟಿಗೆ ಧಕ್ಕೆಯಾಗದಂತೆ ಯುವಿ ಪ್ರೊಟೆಕ್ಷನ್‌ ಇರುವ ಸನ್‌ಗ್ಲಾಸ್‌ ಧರಿಸುವುದು ಕಣ್ಣಿನ ಆರೋಗ್ಯಕ್ಕೆ ಉತ್ತಮ ಎನ್ನುವುದು ಡಾ. ನವ್ಯಾ ಅವರ ಸಲಹೆ.

ವಿಭಾಗ