ಕನ್ನಡ ಸುದ್ದಿ  /  ಕರ್ನಾಟಕ  /  ಮುಂಗಾರು ಪೂರ್ವ ಮಳೆ; ಕರಾವಳಿಯಲ್ಲಿ ಗಾಳಿ ಮಳೆಯ ಅಬ್ಬರ, ಸಿಡಿಲಾಘಾತಕ್ಕೆ ಒಳಗಾಗಿ ಶಿರ್ವ ಕಾಲೇಜು ವಿದ್ಯಾರ್ಥಿ ಸಾವು

ಮುಂಗಾರು ಪೂರ್ವ ಮಳೆ; ಕರಾವಳಿಯಲ್ಲಿ ಗಾಳಿ ಮಳೆಯ ಅಬ್ಬರ, ಸಿಡಿಲಾಘಾತಕ್ಕೆ ಒಳಗಾಗಿ ಶಿರ್ವ ಕಾಲೇಜು ವಿದ್ಯಾರ್ಥಿ ಸಾವು

ಮುಂಗಾರು ಪೂರ್ವ ಮಳೆ; ಕರಾವಳಿಯಲ್ಲಿ ಗಾಳಿ ಮಳೆಯ ಅಬ್ಬರ ಜೋರಾಗಿದ್ದು, ಮೂರು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆಯಾಗಿದೆ. ಈ ನಡುವೆ, ಸಿಡಿಲಾಘಾತಕ್ಕೆ ಒಳಗಾಗಿ ಶಿರ್ವ ಕಾಲೇಜು ವಿದ್ಯಾರ್ಥಿ ಸಾವು ಸಂಭವಿಸಿದೆ. ಮಳೆ ಹಾನಿ ವಿವರ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಕರಾವಳಿಯಲ್ಲಿ ಗಾಳಿ ಮಳೆಯ ಅಬ್ಬರ, ಸಿಡಿಲಾಘಾತಕ್ಕೆ ಒಳಗಾಗಿ ಶಿರ್ವ ಕಾಲೇಜು ವಿದ್ಯಾರ್ಥಿ  ರಕ್ಷಿತ್ (ಒಳಚಿತ್ರದಲ್ಲಿರುವವರು) ಮೃತಪಟ್ಟಿದ್ದಾರೆ. ಇನ್ನೊಂದೆಡೆ, ವಿಟ್ಲ ಕಸಬಾ ಗ್ರಾಮದ ಆಲಂಗಾರು ನಿವಾಸಿ ಶ್ರೀ  ರಮೇಶ ಬಿನ್ ಕುಂಡ ಎಂಬವರ ಹಂಚಿನ ಮನೆ (ಮುಖ್ಯಚಿತ್ರ) ಗೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದೆ.
ಕರಾವಳಿಯಲ್ಲಿ ಗಾಳಿ ಮಳೆಯ ಅಬ್ಬರ, ಸಿಡಿಲಾಘಾತಕ್ಕೆ ಒಳಗಾಗಿ ಶಿರ್ವ ಕಾಲೇಜು ವಿದ್ಯಾರ್ಥಿ ರಕ್ಷಿತ್ (ಒಳಚಿತ್ರದಲ್ಲಿರುವವರು) ಮೃತಪಟ್ಟಿದ್ದಾರೆ. ಇನ್ನೊಂದೆಡೆ, ವಿಟ್ಲ ಕಸಬಾ ಗ್ರಾಮದ ಆಲಂಗಾರು ನಿವಾಸಿ ಶ್ರೀ ರಮೇಶ ಬಿನ್ ಕುಂಡ ಎಂಬವರ ಹಂಚಿನ ಮನೆ (ಮುಖ್ಯಚಿತ್ರ) ಗೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದೆ.

ಮಂಗಳೂರು: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಲ್ಲೊ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದ್ದು, ಶುಕ್ರವಾರದಿಂದೀಚೆಗೆ ಭಾರಿ ಮಳೆಯಾಗುತ್ತಿದೆ. ಶನಿವಾರ ಬೆಳಗಿನ ಜಾವ ದಟ್ಟ ಮೋಡದೊಂದಿಗೆ ಮಳೆಯಾಗುತ್ತಿದ್ದು, ಕೆಲ ದಿನ ಇದೇ ರೀತಿ ಮಳೆ ಸುರಿಯುವ ಲಕ್ಷಣಗಳಿರುವುದಾಗಿ ಇಲಾಖೆ ಮುನ್ಸೂಚನೆ ನೀಡಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ಉಡುಪಿ ಜಿಲ್ಲೆಯ ಶಿರ್ವದಲ್ಲಿ ಭಾರಿ ಗಾಳಿ, ಮಳೆ ಸಂದರ್ಭ ಸಿಡಿಲಾಘಾತದಿಂದ ಕಾಲೇಜು ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ. ಶಿರ್ವ ಎಂಆರ್ ಎಸ್ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿ ಮಾಣಿಬೆಟ್ಟು ತೋಟದಮನೆ ನಿವಾಸಿ ರಮೇಶ್ ಪೂಜಾರಿ ಅವರ ಪುತ್ರ ರಕ್ಷಿತ್ (20) ಸಾವನ್ನಪ್ಪಿದಾತ.

ಕಾಲೇಜು ಬಿಟ್ಟು ಮನೆಗೆ ಬಂದ ಬಳಿಕ ರಕ್ಷಿತ್ ಬಾವಿಕಟ್ಟೆ ಬಳಿ ಇರುವ ಬಚ್ಚಲುಮನೆಗೆ ಸ್ನಾನಕ್ಕೆ ತೆರಳಿದ್ದರು. ಆ ವೇಳೆ ಸಣ್ಣದಾಗಿ ಮಳೆ ಬರುತ್ತಿತ್ತು. ಆತನ ದೊಡ್ಡಪ್ಪ ಸ್ನಾನ ಮಾಡುತ್ತಿದ್ದರು. ಪಕ್ಕದಲ್ಲೇ ತೆಂಗಿನ ಮರ ಮತ್ತು ಅಡಕೆ ಮರವಿದ್ದು ಅದರ ಕೆಳಗೆ ಕೊಡೆ ಹಿಡಿದು ನಿಂತಿದ್ದ ವೇಳೆ ಒಮ್ಮೆಗೆ ಸಿಡಿಲು ಬಡಿದಿದೆ. ಇದರ ರಭಸಕ್ಕೆ ರಕ್ಷಿತ್ ಬೆನ್ನಿನ ಭಾಗ ಸೀಳಾಗಿ ಪೃಷ್ಠದ ಭಾಗದವರೆಗೆ ಕರಟಿಹೋಗಿದ್ದು, ಕೈಯಲ್ಲಿ ಹಿಡಿದಿದ್ದ ಕೊಡೆಯೂ ಮುದ್ದೆಯಾಗಿ ಕೆಳಗೆ ಬಿದ್ದಿದೆ. ಹತ್ತಿರದಲ್ಲೇ ಇದ್ದ ದೊಡ್ಡಪ್ಪ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ರಕ್ಷಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾರೆ. ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾದ ರಕ್ಷಿತ್ ಸಾವಿನ ಹಿನ್ನೆಲೆಯಲ್ಲಿ ಆತನ ಮನೆಗೆ ಕಾಲೇಜು ವಿದ್ಯಾರ್ಥಿಗಳು, ಊರವರು ಸೇರಿ ಅಂತಿಮ ದರ್ಶನ ಪಡೆದರು.

ಮೂರು ದಿನ ಯಲ್ಲೊ ಅಲರ್ಟ್

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮೂರು ದಿನ ಯಲ್ಲೊ ಅಲರ್ಟ್ ಘೋಷಿಸಲಾಗಿದೆ. ಮೇ 25ರಿಂದ 27ರವರೆಗೆ ಕರಾವಳಿ ಭಾಗದಲ್ಲಿ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ, ಪಡುಬಿದ್ರಿ ಪರಿಸರದಲ್ಲಿ ಉತ್ತಮ ಮಳೆಯಾಗಿದ್ದು, ಸುಮಾರು 42 ಸಾವಿರಕ್ಕೂ ಅಧಿಕ ಆಸ್ತಿ ನಷ್ಟ ಉಂಟಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. ಕುಂದಾಪುರದಲ್ಲಿ 11 ಮನೆಗಳಿಗೆ ಭಾಗಶಃ ಹಾನಿಯಾಗಿದ್ದರೆ, ಬ್ರಹ್ಮಾವರದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಮುಕ್ಕದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅರಂತೋಡು ಎಂಬಲ್ಲಿ ಭಾರಿ ಗಾತ್ರದ ಮರ ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಮಂಜಿನ ವಾತಾವರಣ ನಿರ್ಮಾಣವಾಗಿದೆ.

ಕೃತಕ ನೆರೆ, ಯಕ್ಷಗಾನ ಮೊಟಕು

ಕಿನ್ನಿಗೋಳಿ ಹಾಗೂ ಹಳೆಯಂಗಡಿ ಪ್ರದೇಶದಲ್ಲಿ ಕಳೆದ ಆರು ಗಂಟೆಗಳಿಂದ ಮಳೆ ಬರುತ್ತಿದ್ದು 3 ಗಂಟೆಗಳಿಂದ ಧಾರಾಕಾರ ಮಳೆ ಬಂದು ಶಶಿ ಹಿತ್ಲು ಪತ್ತ ನಾಜೆ ಸೇವೆ ಕೃತಕ ನೆರೆ ಬಂದ ಕಾರಣಕ್ಕೆ ಆಟ ಅರ್ಧದಲ್ಲೇ ಮೊಟಕುಗೊಳಿಸಲಾಯಿತು. ಮಳೆಗೆ ಕಿನ್ನಿಗೋಳಿ ಪ್ರದೇಶದಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ 12 ಗಂಟೆವರೆಗೆ ಪಕ್ಷಿಗೆರೆ ಸಂಪರ್ಕಿಸ್ವರಸ್ತೆಯಲ್ಲಿ ಹಲವೆಡೆ ಕೃತಕ ನೆರೆ ಉಂಟಾಗಿದೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಶನಿವಾರ ಬೆಳಗ್ಗೆಯೂ ಧಾರಾಕಾರ ಮಳೆ ಸುರಿಯುತ್ತಿದ್ದು, ಕಚೇರಿಗಳಿಗೆ ಹೋಗುವವರು ತೊಂದರೆ ಅನುಭವಿಸಬೇಕಾಯಿತು.

ನೇತ್ರಾವತಿ ನದಿಯಲ್ಲಿ ನೀರು; ರೇಷನಿಂಗ್ ಸಮಸ್ಯೆಯಿಂದ ಪಾರು

ನೇತ್ರಾವತಿ ನದಿಯಲ್ಲಿ ನೀರು ಶೇಖರಣೆಯಾಗಿರುವ ಕಾರಣ ಮಂಗಳೂರು ನಗರ ರೇಷನಿಂಗ್ ಸಮಸ್ಯೆಯಿಂದ ಪಾರಾಗಿದೆ.
ನೇತ್ರಾವತಿ ನದಿಯಲ್ಲಿ ನೀರು ಶೇಖರಣೆಯಾಗಿರುವ ಕಾರಣ ಮಂಗಳೂರು ನಗರ ರೇಷನಿಂಗ್ ಸಮಸ್ಯೆಯಿಂದ ಪಾರಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವುದಷ್ಟೇ ಅಲ್ಲ, ಘಟ್ಟ ಪ್ರದೇಶದಲ್ಲೂ ಮಳೆಯ ಪರಿಣಾಮದಿಂದ ನೇತ್ರಾವತಿ ನದಿಯಲ್ಲಿ ನೀರು ಹೆಚ್ಚಾಗಿದ್ದು, ಮಂಗಳೂರಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ.

ಬಹುಗ್ರಾಮ ಕುಡಿಯುವ ನೀರನ್ನೇ ಆಶ್ರಯಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನರು ನೇತ್ರಾವತಿಯನ್ನೇ ಅವಲಂಬಿಸಬೇಕಾದ ಕಾರಣ ನೀರಿನ ಹರಿವು ಹೆಚ್ಚಾದ ಹಿನ್ನೆಲೆ ಅಲ್ಲಿಗೂ ಸಮಸ್ಯೆ ಇಲ್ಲ.

ಶಂಭೂರು ಎಎಂಆರ್ ಡ್ಯಾಮ್ ಭರ್ತಿಯಾಗಿ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿದೆ. ಹೀಗಾಗಿ ತುಂಬೆ ಡ್ಯಾಮ್‌ನಲ್ಲೂ ನೀರಿನ ಮಟ್ಟ ಬಹುತೇಕ 6 ಮೀ.ಗೆ ತಲುಪಿದ್ದು, ಸದ್ಯಕ್ಕೆ ನೀರಿನ ಆತಂಕ ಇಲ್ಲ.

ನದಿಯಲ್ಲಿ ದಿನೇ ದಿನೇ ನೀರು ಕುಸಿಯುತ್ತಿರುವ ಪರಿಣಾಮ ಈ ಬಾರಿಯೂ ನೀರು ಬರ ಎದುರಾಗಲಿದೆ ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೆ ದ.ಕ.ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ, ನದಿಯಲ್ಲಿ ನೀರಿನ ಹರಿವು ಆರಂಭಗೊಂಡಿತ್ತು.

ಈ ಕಾರಣದಿಂದ ಮಂಗಳೂರಿನ ನೀರಿನ ಆತಂಕ ದೂರವಾಗುವ ಜತೆಗೆ ಬಂಟ್ವಾಳ, ಉಪ್ಪಿನಂಗಡಿಯಲ್ಲೂ ಸಮಸ್ಯೆ ದೂರವಾಗಿದೆ. ಮಂಗಳೂರು ಮಹಾನಗರಪಾಲಿಕೆ, ಬಂಟ್ವಾಳ ಪುರಸಭೆ ಹಾಗೂ ಗ್ರಾಮೀಣ ಭಾಗಗಳ ನೀರಿನ ಬರದ ಆತಂಕ ದೂರವಾಗಿದೆ. ಮಂಗಳೂರಿನ ಜನರಿಗೆ ತುಂಬೆಯಿಂದ ಸಂಗ್ರಹವಾಗುವ ನೀರು ಒದಗಿಸಬೇಕಿದ್ದರೆ, ಬಂಟ್ವಾಳದ ಸುಮಾರು 4 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ನೀರಿಗೆ ನೇತ್ರಾವತಿ ನದಿಯನ್ನೇ ಆಶ್ರಯಿಸಿಕೊಂಡಿದ್ದು, ನದಿಯಲ್ಲಿ ನೀರು ಕಡಿಮೆಯಾಗುತ್ತಿರುವ ಪರಿಣಾಮ ಗ್ರಾಮೀಣ ಭಾಗದಲ್ಲಿ ನೀರಿನ ಸಮರ್ಪಕ ಪೂರೈಕೆಗೆ ತೊಂದರೆ ಉಂಟಾಗಿತ್ತು.

ಶಂಭೂರು ಎಎಂಆರ್ ಡ್ಯಾಮ್‌ನಲ್ಲಿ ನೀರು ಭರ್ತಿಯಾಗಿರುವ ಪರಿಣಾಮ ಮೇ 20ರಿಂದ ವಿದ್ಯುತ್ ಉತ್ಪಾದನೆ ಆರಂಭಿಸಿ ನೀರನ್ನು ಕೆಳಕ್ಕೆ ಬಿಡಲಾಗಿದ್ದು, ಹೀಗಾಗಿ 3 ಮೀ.ಗಳಿಗೆ ತಗ್ಗಿದ್ದ ನೀರಿನ ಮಟ್ಟ 5 ದಾಟಿತು.

ಎಎಂಆರ್ ನಲ್ಲಿ ವಿದ್ಯುತ್ ಉತ್ಪಾದನೆ ಆರಂಭ

ದ.ಕ.ಜಿಲ್ಲಾಡಳಿತ ಸೂಚನೆಯಂತೆ ಶಂಭೂರು ಡ್ಯಾಮ್‌ನಲ್ಲಿ ನೀರನ್ನು ಉಳಿಸಲಾಗಿದ್ದು, ವಿದ್ಯುತ್ ಉತ್ಪಾದನೆ ಸಾಧ್ಯವಾಗಿರಲಿಲ್ಲ. ಆದರೆ ಮುಂದೆ 18.9 ಮೀ. ನೀರು ಉಳಿಸಿಕೊಂಡು ಹೆಚ್ಚುವರಿ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಡ್ಯಾಮ್ ಭರ್ತಿಯಾಗಿರುವ ಪರಿಣಾಮ ಸರಪಾಡಿ, ಬರಿಮಾರು, ಅಜಿಲಮೊಗರು, ಕಡೇಶ್ವಾಲ್ಯ ಭಾಗದಲ್ಲಿ ಹಿನ್ನೀರು ತುಂಬಿಕೊಂಡಿದೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024