Karnataka News Live November 1, 2024 : Siddaramaiah vs Modi: ರಾಜಕೀಯ ಪುಡಾರಿ ರೀತಿ ಹೇಳಿಕೆ ಕೊಡಬೇಡಿ, ಪ್ರಣಾಳಿಕೆಗಳ ಜತೆ ಚರ್ಚೆಗೆ ಬನ್ನಿ: ಮೋದಿಗೆ ಸಿದ್ದರಾಮಯ್ಯ ಪಂಥಾಹ್ವಾನ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live November 1, 2024 : Siddaramaiah Vs Modi: ರಾಜಕೀಯ ಪುಡಾರಿ ರೀತಿ ಹೇಳಿಕೆ ಕೊಡಬೇಡಿ, ಪ್ರಣಾಳಿಕೆಗಳ ಜತೆ ಚರ್ಚೆಗೆ ಬನ್ನಿ: ಮೋದಿಗೆ ಸಿದ್ದರಾಮಯ್ಯ ಪಂಥಾಹ್ವಾನ

Siddaramaiah vs Modi: ರಾಜಕೀಯ ಪುಡಾರಿ ರೀತಿ ಹೇಳಿಕೆ ಕೊಡಬೇಡಿ, ಪ್ರಣಾಳಿಕೆಗಳ ಜತೆ ಚರ್ಚೆಗೆ ಬನ್ನಿ: ಮೋದಿಗೆ ಸಿದ್ದರಾಮಯ್ಯ ಪಂಥಾಹ್ವಾನ

Karnataka News Live November 1, 2024 : Siddaramaiah vs Modi: ರಾಜಕೀಯ ಪುಡಾರಿ ರೀತಿ ಹೇಳಿಕೆ ಕೊಡಬೇಡಿ, ಪ್ರಣಾಳಿಕೆಗಳ ಜತೆ ಚರ್ಚೆಗೆ ಬನ್ನಿ: ಮೋದಿಗೆ ಸಿದ್ದರಾಮಯ್ಯ ಪಂಥಾಹ್ವಾನ

04:54 PM ISTNov 01, 2024 10:24 PM HT Kannada Desk
  • twitter
  • Share on Facebook
04:54 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Fri, 01 Nov 202404:54 PM IST

ಕರ್ನಾಟಕ News Live: Siddaramaiah vs Modi: ರಾಜಕೀಯ ಪುಡಾರಿ ರೀತಿ ಹೇಳಿಕೆ ಕೊಡಬೇಡಿ, ಪ್ರಣಾಳಿಕೆಗಳ ಜತೆ ಚರ್ಚೆಗೆ ಬನ್ನಿ: ಮೋದಿಗೆ ಸಿದ್ದರಾಮಯ್ಯ ಪಂಥಾಹ್ವಾನ

  • ಕರ್ನಾಟಕದ ಗ್ಯಾರಂಟಿ ಯೋಜನೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ಮುಂದುವರಿದಿದ್ದರೆ, ಈ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪಂಥಾಹ್ವಾನವನ್ನು ನೀಡಿದ್ದಾರೆ.
Read the full story here

Fri, 01 Nov 202404:18 PM IST

ಕರ್ನಾಟಕ News Live: ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾದ ದರ್ಶನ್‌, ಚಿಕಿತ್ಸೆ ಆರಂಭ; ಸದ್ಯಕ್ಕೆ ಪ್ರಾಥಮಿಕ ಚಿಕಿತ್ಸೆ, 2 ದಿನ ಆಸ್ಪತ್ರೆ ಫಿಕ್ಸ್‌

  •  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ  ಆರೋಪದಡಿ ಬಂಧನಕ್ಕೊಳಗಾಗಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ವರದಿ: ಎಚ್‌. ಮಾರುತಿ, ಬೆಂಗಳೂರು

Read the full story here

Fri, 01 Nov 202402:56 PM IST

ಕರ್ನಾಟಕ News Live: ಕೇಂದ್ರ ಸೇವೆಗೆ ಹೊರಡುತ್ತಿರುವ ಕರ್ನಾಟಕದ ಪ್ರತಿಭಾವಂತ ಐಎಫ್‌ಎಸ್‌ ದಂಪತಿ: ಅರಣ್ಯ ಇಲಾಖೆಯಿಂದ ಹೊರ ಹೋಗ ಬಯಸಿದ್ದಕ್ಕೆ ಕಾರಣ ವಾದರೂ ಏನು?

  • ಕರ್ನಾಟಕದಲ್ಲಿಯೇ ಸೇವೆ ಸಲ್ಲಿಸಲೆಂದೇ ಬರುವ ಅಧಿಕಾರಿಗಳಿಗೆ ಅನಗತ್ಯ ಕಿರಿಕಿರಿಯಾದರೆ ಕೇಂದ್ರ ಸೇವೆಗೆ ತೆರಳಿದರೆ ಹೊಡೆತ ಬೀಳುವುದು ಕರ್ನಾಟಕಕ್ಕೆ. ಈಗ ಐಎಫ್‌ಎಸ್‌ ದಂಪತಿ ಕೇಂದ್ರ ಸೇವಗೆ ಹೊರಟಿದ್ದಾರೆ. ಕಾರಣವೇನು. ಇಲ್ಲಿದೆ ವಿವರ.
Read the full story here

Fri, 01 Nov 202412:45 PM IST

ಕರ್ನಾಟಕ News Live: Giraffe: ದಿನದಲ್ಲಿ ಬರೀ 10 ನಿಮಿಷ ನಿದ್ದೆ ಮಾಡುವ, ನಿರಂತರ ತಿನ್ನುವ ಜಿರಾಫೆ ಬಗ್ಗೆ ನಿಮಗೆಷ್ಟು ಗೊತ್ತು;ಆಸಕ್ತಿದಾಯಕ 10 ಅಂಶ ನೋಡಿ

  • ಜಿರಾಫೆ(Giraffe) ನೋಡುವುದೇ ಚಂದ. ಉದ್ದ ಕತ್ತಿನ ಅತೀ ಎತ್ತರ ಪ್ರಾಣಿಗಳ ಪಟ್ಟಿಯಲ್ಲಿ ಜಿರಾಫೆಗೆ ಮೊದಲ ಸ್ಥಾನ. ದಕ್ಷಿಣ ಆಫ್ರಿಕಾದ ಕಾಡುಗಳಲ್ಲಿ ನೆಲೆ ಕಂಡುಕೊಂಡಿರುವ ಜಿರಾಫೆಗಳು ಕರ್ನಾಟಕದ ಮೃಗಾಲಯಗಳಲ್ಲೂ ಉಂಟು. ಜಿರಾಫೆ ಕುರಿತ ಆಸಕ್ತಿದಾಯಕ ಮಾಹಿತಿ ಇಲ್ಲಿದೆ
  • ಮಾಹಿತಿ: ಪರಿಸರ ಪರಿವಾರ
Read the full story here

Fri, 01 Nov 202411:56 AM IST

ಕರ್ನಾಟಕ News Live: Vijayapur Airport: ವಿಜಯಪುರ ನಿಲ್ದಾಣ ಬಹುತೇಕ ಪೂರ್ಣ, 2025 ರ ವೇಳೆಗೆ ಉದ್ಘಾಟನೆ ಸಾಧ್ಯತೆ; ರಾತ್ರಿ ವೇಳೆ ಕಾರ್ಯಾಚರಣೆಗೂ ವ್ಯವಸ್ಥೆ

  • ಐದು ವರ್ಷದಿಂದ ಪ್ರಗತಿಯಲ್ಲಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಮುಂದಿನ ವರ್ಷ ಉದ್ಘಾಟನೆಯಾಗಲಿದೆ. ಈ ಕುರಿತ ವಿವರ ಇಲ್ಲಿದೆ.
Read the full story here

Fri, 01 Nov 202411:20 AM IST

ಕರ್ನಾಟಕ News Live: ಕನ್ನಡವನ್ನು ಹೀಯಾಳಿಸಬೇಡಿ, ಅದು ನಾಡದ್ರೋಹ; ಅದರ ವಿರುದ್ಧ ಕಠಿಣ ಕ್ರಮ: ಕನ್ನಡ ರಾಜ್ಯೋತ್ಸವ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

  • ಕರ್ನಾಟಕ ರಾಜ್ಯೋತ್ಸವ (Karnataka Rajyotsava 2024): ಕರ್ನಾಟಕದ 69ನೇ  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನ್ನಡವನ್ನು ಹೀಯಾಳಿಸಬೇಡಿ, ಅದು ನಾಡದ್ರೋಹ ಎಂದು ಅಂತಹ ಕೃತ್ಯವೆಸಗುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ. ಅವರ ಭಾಷಣದ ಮುಖ್ಯ ಅಂಶಗಳ ವಿವರ ಇಲ್ಲಿದೆ.

Read the full story here

Fri, 01 Nov 202410:14 AM IST

ಕರ್ನಾಟಕ News Live: ಕನ್ನಡ ರಾಜ್ಯೋತ್ಸವ; ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಶೇ50 ರಿಯಾಯಿತಿ, ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ, ಇನ್ನೆಲ್ಲಿ ಎಷ್ಟು ರಿಯಾಯಿತಿ

  • ಕನ್ನಡ ರಾಜ್ಯೋತ್ಸವ; ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಶೇ50 ರಿಯಾಯಿತಿಯಲ್ಲಿ ಪುಸ್ತಕ ಮಾರಾಟವಾಗುತ್ತಿದೆ. ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ ಈಗಾಗಲೇ ಶುರುವಾಗಿದ್ದು, ರಿಯಾಯಿತಿ ದರದಲ್ಲಿ ಕನ್ನಡ ಪುಸ್ತಕ ಮಾರಾಟ ನಡೆಯುತ್ತಿದೆ. ಇನ್ನು ಆಯ್ದ ಮಳಿಗೆಗಳಲ್ಲಿ ಎಷ್ಟು ರಿಯಾಯಿತಿ ಇದೆ ಎಂಬ ಮಾಹಿತಿ ಇಲ್ಲಿದೆ. 

Read the full story here

Fri, 01 Nov 202410:11 AM IST

ಕರ್ನಾಟಕ News Live: Karnataka Reservoirs: ಸತತ 3 ತಿಂಗಳಿನಿಂದ ಪೂರ್ಣ ತುಂಬಿವೆ ಕರ್ನಾಟಕದ 6 ಜಲಾಶಯಗಳು; ಹೆಚ್ಚು, ಕಡಿಮೆ ನೀರು ಸಂಗ್ರಹ ಎಲ್ಲೆಲ್ಲಿ

  • ಕರ್ನಾಟಕದಲ್ಲಿ ಜಲಾಶಯಗಳಲ್ಲಿ ಯಥೇಚ್ಚ ನೀರು ಸಂಗ್ರಹವಾಗಿದೆ. ಮಳೆಗಾಲ ಅಕ್ಟೋಬವರೆಗೂ ವಿಸ್ತರಣೆಗೊಂಡು ಜಲಾಶಯಗಳಿಗೆ ಈಗಲೂ ನೀರು ಹರಿದು ಬರುತ್ತಿದೆ. ಆಲಮಟ್ಟಿ, ಲಿಂಗನಮಕ್ಕಿ, ಭದ್ರಾ, ಕೆಆರ್‌ಎಸ್‌ ಸಹಿತ ಜಲಾಶಯಗಳ ನೀರಿನ ಮಟ್ಟ ಹೀಗಿದೆ.
Read the full story here

Fri, 01 Nov 202408:34 AM IST

ಕರ್ನಾಟಕ News Live: ಕನ್ನಡ ರಾಜ್ಯೋತ್ಸವ 2024: ಅಕ್ಕಡಿ ಬೇಸಾಯ, ಬೆರಕೆ ಸೊಪ್ಪಿನ ಜ್ಞಾನದ ಖನಿ ಚಾಮರಾಜನಗರದ ಪುಟ್ಟೀರಮ್ಮನಿಗೆ ರಾಜ್ಯೋತ್ಸವ ಪುರಸ್ಕಾರ

  • ಕೃಷಿ ಎಂದರೆ ಖುಷಿ ಎನ್ನುವ ಮಾತಿದೆ. ಹಾಗೆ ಕೃಷಿ ಮಾಡುತ್ತಲೇ ಖುಷಿಯನ್ನು ಹಂಚುತ್ತಿರುವ, ಸೊಪ್ಪುಗಳನ್ನು ಬೆಳೆದು ಅದರ ಕುರಿತು ಜನಪದ ಗೀತೆಗಳ ಮೂಲಕ ಜನರಿಗೆ ತಲುಪಿಸುವ ಚಾಮರಾಜನಗರದ ಪುಟ್ಟೀರಮ್ಮ ಅವರ ಬದುಕು ಮಾದರಿ. ಅವರಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಈ ಕುರಿತು ಲೇಖಕ ಮಲ್ಲಿಕಾರ್ಜುನ ಹೊಸ ಪಾಳ್ಯ ಬರೆದಿರುವ ಲೇಖನವಿದು.
Read the full story here

Fri, 01 Nov 202408:28 AM IST

ಕರ್ನಾಟಕ News Live: ಬೆಂಗಳೂರು ಕಸವನಹಳ್ಳಿಯಲ್ಲಿ ಪುಂಡರ ರಸ್ತೆ ದೌರ್ಜನ್ಯ; 5 ವರ್ಷದ ಬಾಲಕನಿಗೆ ಗಾಯ, ಕಾರಿನ ಗಾಜು ಒಡೆದ ಆರೋಪಿಗಳ ಗುರುತು ಪತ್ತೆ

  • ಬೆಂಗಳೂರು ಕಸವನಹಳ್ಳಿಯಲ್ಲಿ ಪುಂಡರ ರಸ್ತೆ ದೌರ್ಜನ್ಯ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ. ಈ ದಾಳಿಯಲ್ಲಿ 5 ವರ್ಷದ ಬಾಲಕನಿಗೆ ಗಾಯವಾಗಿದೆ. ಕಾರಿನ ಗಾಜು ಒಡೆದು ಕುಟುಂಬವನ್ನು ಬೆದರಿಸಿದ ಆರೋಪಿಗಳ ಗುರುತುಪತ್ತೆಯಾಗಿದ್ದು, ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

Read the full story here

Fri, 01 Nov 202408:00 AM IST

ಕರ್ನಾಟಕ News Live: ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕ ಆರ್ಥಿಕ ಸಾಧನೆ; ಮೊದಲ 7 ತಿಂಗಳಲ್ಲೇ 103689 ಕೋಟಿ ಸಂಗ್ರಹ

  • Karnataka fiscal performance: ಕರ್ನಾಟಕ ರಾಜ್ಯದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ (2024-2025) ಉತ್ತಮ ಆರ್ಥಿಕ ಸಾಧನೆ ಮಾಡಿದ್ದು, ಮೊದಲ 7 ತಿಂಗಳಲ್ಲೇ 103689 ಕೋಟಿ ಸಂಗ್ರಹ ಮಾಡಿದೆ.
Read the full story here

Fri, 01 Nov 202406:29 AM IST

ಕರ್ನಾಟಕ News Live: ಕನ್ನಡ ನನ್ನ ಭಾಷೆ ಎಂಬ ಆತ್ಮಗೌರವ ಪ್ರತಿ ಕನ್ನಡಿಗನಲ್ಲೂ ಇದ್ದರೆ ಭಾಷೆ ಉಳಿಸಿ, ಬೆಳೆಸಲು ಯಾವ ಹೋರಾಟವೂ ಬೇಕಿಲ್ಲ; ರಂಗಸ್ವಾಮಿ ಮೂಕನಹಳ್ಳಿ ಬರಹ

  • ಕನ್ನಡ ಬದುಕಿನ ಭಾಷೆ, ಮನಸ್ಸಿನ ಭಾಷೆ. ಎಲ್ಲಾ ಕನ್ನಡಿಗರೂ ಇವತ್ತಿನಿಂದ ವ್ಯವಹಾರಿಕ ಪ್ರಪಂಚದಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಉಪಯೋಗಿಸುವುದಿಲ್ಲ ಎನ್ನುವ ನಿರ್ಧಾರ ತೆಗೆದುಕೊಂಡರೆ ಸಾಕು. ಬೇರಾವ ಕನ್ನಡ ಸಂಘಟನೆಗಳು ಕೂಡ ಬೇಡವಾಗುತ್ತವೆ. ಒತ್ತಾಯ , ಹೋರಾಟದಿಂದ ಪರಿಸ್ಥಿತಿ ಬದಲಾಗುವುದಿಲ್ಲ , ಬದಲಿಗೆ ವ್ಯಕ್ತಿ, ಸಂಘಂಟನೆಗಳು ಬಲವಾಗುತ್ತವೆ. 
Read the full story here

Fri, 01 Nov 202406:06 AM IST

ಕರ್ನಾಟಕ News Live: ಕನ್ನಡ ರಾಜ್ಯೋತ್ಸವ; ನಡೆದಾಡುವ ಕೃಷಿ ವಿಶ್ವಕೋಶ ಶಿವನಾಪುರದ ರಮೇಶ್‌ ಅವರಿಗೆ ಅರ್ಹವಾಗಿ ಸಂದ ರಾಜ್ಯೋತ್ಸವ ಪ್ರಶಸ್ತಿ, ಕರುನಾಡ ಹೆಮ್ಮೆ

  • ಸುವರ್ಣ ಕರ್ನಾಟಕ ವರ್ಷಾಚರಣೆ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಶಿವನಾಪುರದ ರಮೇಶ್ ಕರುನಾಡ ಹೆಮ್ಮ. ಅವರು ನಡೆದಾಡುವ ಕೃಷಿ ವಿಶ್ವಕೋಶವಾಗಿದ್ದು, ಸಹಜ ಸಮೃದ್ಧ ಬಳಗದ ಮೂಲಕ ನೂರಾರು ರೈತರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಸಹಜ ಸಮೃದ್ಧ ಬಳಗದ ಕೃಷ್ಣಪ್ರಸಾದ್ ಅವರು ನೆನಪಿಸಿಕೊಂಡು ಗೌರವ ಸಲ್ಲಿಸಿದ್ದಾರೆ. ಆ ಬರಹ ಇಲ್ಲಿದೆ.

Read the full story here

Fri, 01 Nov 202405:36 AM IST

ಕರ್ನಾಟಕ News Live: ದೀಪಾವಳಿ ವೇಳೆ ಹೂವು, ಹಣ್ಣುಗಳ ದರ ನವರಾತ್ರಿಗಿಂತಲೂ ಹೆಚ್ಚಾಗಿದೆಯಾ? ಮಳೆ ಬಂದ ಕಾರಣ ಇಳಿಕೆಯಾಗಿದೆಯಾ? ಇಲ್ಲಿದೆ ವಿವರ

  • ದೀಪಾವಳಿ ಹಬ್ಬದ ಸಂಭ್ರಮ. ಹೂವು ಹಣ್ಣುಗಳ ಖರೀದಿಯೂ ಹೆಚ್ಚು. ಆದರೆ, ಹೂವು ಹಣ್ಣುಗಳ ದರ ನವರಾತ್ರಿಗಿಂತಲೂ ಹೆಚ್ಚಾಗಿದೆಯಾ ಹೇಗಿದೆ ಪರಿಸ್ಥಿತಿ. ಮಳೆ ಬೇರೆ ಬರುತ್ತಿದೆಯಲ್ಲ, ಬೇಡಿಕೆ ಕುಸಿದ ಕಾರಣ ದರವೂ ಕುಸಿದಿದೆಯಾ- ಇಲ್ಲಿದೆ ಆ ವಿವರ.

Read the full story here

Fri, 01 Nov 202403:06 AM IST

ಕರ್ನಾಟಕ News Live: ಬಸವಣ್ಣನ ಪುರುಷ ಅಹಂಕಾರ ವಿವಾದ; ಮಹಿಳೆಯರ ಮಟ್ಟಿಗೆ ಈ ಬಗೆಯ ಟೀಕೆಗಳು ಹೊಸತೇನೂ ಅಲ್ಲ- ಎನ್‌ಎಎಂ ಇಸ್ಮಾಯಿಲ್ ಬರಹ

  • ಬಸವಣ್ಣನ ಪುರುಷ ಅಹಂಕಾರ ವಿವಾದದ ಹಿನ್ನೆಲೆಯಲ್ಲಿ ಪರ ವಿರೋಧ ಚರ್ಚೆಗಳಾಗುತ್ತಿವೆ. ಈ ನಡುವೆ, ಚಿಂತಕಿ ಅವರು ತಮ್ಮ ಉಪನ್ಯಾಸಕ್ಕೆ ಸಂಬಂಧಿಸಿದ ಟೀಕೆಗಳಿಗೆ ಸಮರ್ಥವಾಗಿ ಉತ್ತರಿಸಿದ್ದಾರೆ. ಇದಕ್ಕೆ ಪೂರಕವಾಗಿ, ಮಹಿಳೆಯರ ಮಟ್ಟಿಗೆ ಈ ಬಗೆಯ ಟೀಕೆಗಳು ಹೊಸತೇನೂ ಅಲ್ಲ ಎಂದು ಪತ್ರಕರ್ತ ಎನ್‌ಎಂಎ ಇಸ್ಮಾಯಿಲ್ ತಮ್ಮ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.

Read the full story here

Fri, 01 Nov 202401:35 AM IST

ಕರ್ನಾಟಕ News Live: ದೀಪಾವಳಿ ಪಟಾಕಿ ಹಚ್ಚೋಕೆ ಬಿಡ್ತಾನಾ ಮಳೆರಾಯ, ಬೆಂಗಳೂರಲ್ಲಿ ಇಂದು ಮಳೆ ಬರುತ್ತಾ, ಕರ್ನಾಟಕ ಹವಾಮಾನ ಹೀಗಿದೆ

  • ನಾಡಿನ ಉದ್ದಗಲಕ್ಕೂ ದೀಪಾವಳಿ ಸಂಭ್ರಮ. ಮತ್ತೆ ಮಳೆ ಶುರುವಾಗಿರುವ ಕಾರಣ, ದೀಪಾವಳಿ ಪಟಾಕಿ ಹಚ್ಚೋಕೆ ಬಿಡ್ತಾನಾ ಮಳೆರಾಯ, ಬೆಂಗಳೂರಲ್ಲಿ ಇಂದು ಮಳೆ ಬರುತ್ತಾ ಎಂಬಿತ್ಯಾದಿ ಸಂದೇಹಗಳು ಕಾಡತೊಡಗಿವೆ. ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿರುವ ಕರ್ನಾಟಕ ಹವಾಮಾನದ ವಿವರ ಹೀಗಿದೆ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter