ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live September 28, 2024 : Black Pepper Diseases: ಕೃಷಿಕನಿಗೆ ಆಘಾತ ನೀಡಿದ ಕಾಳುಮೆಣಸು ಬಳ್ಳಿಯನ್ನೇ ಕೊಲ್ಲುವ ಸೊರಗು ರೋಗ!
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 28 Sep 202403:25 PM IST
ಕರ್ನಾಟಕ News Live: Black Pepper Diseases: ಕೃಷಿಕನಿಗೆ ಆಘಾತ ನೀಡಿದ ಕಾಳುಮೆಣಸು ಬಳ್ಳಿಯನ್ನೇ ಕೊಲ್ಲುವ ಸೊರಗು ರೋಗ!
- Black Pepper Diseases: ಕಾಳು ಮೆಣಸಿಗೆ ದಕ್ಕಿದ ಬೆಲೆಯಿಂದಾಗಿ ರೈತರು ಚೇತರಿಸಿಕೊಳ್ಳುತ್ತಿರುವಾಗಲೇ ಈ ವರ್ಷ ಅನಿಯಮಿತ ಮಳೆಯಿಂದ ಮತ್ತೆ ಸಂಕಷ್ಟಕ್ಕೀಡಾಗಿದ್ದಾನೆ. ಕಾಳುಮೆಣಸಿನ ಬಳ್ಳಿಗೆ ಸೊರಗು ರೋಗ ಇದಕ್ಕೆ ಕಾರಣ. (ವಿಶೇಷ ವರದಿ: ಹರೀಶ ಮಾಂಬಾಡಿ)
Sat, 28 Sep 202403:03 PM IST
ಕರ್ನಾಟಕ News Live: ಅಕ್ಟೋಬರ್ 4ರಂದು ಪಂಚಾಯತ್ ಸೇವೆ ಬಂದ್; ಪಿಡಿಒ, ಸಿಬ್ಬಂದಿಯಿಂದ ಅನಿರ್ದಿಷ್ಟ ಹೋರಾಟ, ಸರ್ಕಾರಕ್ಕೆ ಎಚ್ಚರಿಕೆ
- RDPR Protest: ವಿವಿಧ ಬೇಡಿಕೆಗೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಕ್ಟೋಬರ್ 4ರಂದು ರಾಜ್ಯಾದ್ಯಂತ ಪಂಚಾಯತ್ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Sat, 28 Sep 202402:22 PM IST
ಕರ್ನಾಟಕ News Live: ಹೆದ್ದಾರಿಯಲ್ಲಿ ಕಾರು ಧಗಧಗ: ಸುಮಾರು 50 ಲಕ್ಷದ ಬಿಎಂಡಬ್ಲ್ಯೂ ಕಾರು ನಡುರಸ್ತೆಯಲ್ಲೇ ಭಸ್ಮ, ರಸ್ತೆ ಬ್ಲಾಕ್
- BMW Car Burnt: ಮಂಗಳೂರು ಹೊರವಲಯದಲ್ಲಿ ಸಹ್ಯಾದ್ರಿ ಕಾಲೇಜು ಬಳಿಯ ಅಡ್ಯಾರ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಬಿಎಂಡಬ್ಲ್ಯು ಕಾರು ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
Sat, 28 Sep 202401:51 PM IST
ಕರ್ನಾಟಕ News Live: Mahisha Dasara: ಮಹಿಷಾ ಮಂಡಲೋತ್ಸವ ಆಚರಣೆ; ಚಾಮುಂಡಿ ಬೆಟ್ಟ ಸೇರಿ ಮೈಸೂರಿನಲ್ಲಿ ನಿಷೇದಾಜ್ಞೆ ಜಾರಿ
- Mahisha Dasara Row: ಮಹಿಷಾ ಮಂಡಲೋತ್ಸವ ಆಚರಿಸುವ ಹಿನ್ನೆಲೆ ಮೈಸೂರಿನಲ್ಲಿ ನಿಷೇದಾಜ್ಞೆ ಹೇರಲಾಗಿದೆ. ಮೈಸೂರು ನಗರದ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
Sat, 28 Sep 202412:48 PM IST
ಕರ್ನಾಟಕ News Live: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ನೀಡಬೇಕೆ, ಇದು ಅನ್ಯಾಯವಲ್ಲವೇ; ರಾಜೀವ ಹೆಗಡೆ ಬರಹ
- ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎನ್ನುವುದಾದರೆ, ಆ ಮಾನದಂಡ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಹುದ್ದೆಗೂ ಅನ್ವಯವಾಗಬೇಕಲ್ಲವೇ ಎಂದು ಹಿರಿಯ ಪತ್ರಕರ್ತ ರಾಜೀವ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Sat, 28 Sep 202412:12 PM IST
ಕರ್ನಾಟಕ News Live: ಜಟಾಪಟಿ: ಸಿಎಂ ವಿರುದ್ಧ ಮಾಜಿ ಸಿಎಂ ಸಾಲು ಸಾಲು ಆರೋಪ; ಕುಮಾರಸ್ವಾಮಿ ಆರೋಪಕ್ಕೆ ಉತ್ತರ ಕೊಡಲ್ಲ ಎಂದ ಸಿದ್ದರಾಮಯ್ಯ
- Siddaramaiah vs HD Kumarasway: ಸಿಎಂ ವಿರುದ್ಧ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದ ಹೆಚ್ಡಿಕೆ, ಅದರಂತೆ ಇಂದು (ಸೆಪ್ಟೆಂಬರ್ 28, ಶನಿವಾರ) ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮತ್ತೆ ಸಾಲು ಸಾಲು ಆರೋಪ ಮಾಡಿದರು. ಮತ್ತೊಂದೆ ಕುಮಾರಸ್ವಾಮಿ ಆರೋಪಗಳಿಗೆ ನಾನು ಉತ್ತರ ಕೊಡಲ್ಲ ಎಂದು ಸಿಎಂ ಕಿಡಿಕಾರಿದ್ದಾರೆ.
Sat, 28 Sep 202410:21 AM IST
ಕರ್ನಾಟಕ News Live: MUDA Case: ತನಿಖಾಧಿಕಾರಿಗಳ ಕಾರ್ಯವೈಖರಿ ಏನು, ಸಿಎಂ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು, ಎದುರಾಗುವ ಸವಾಲುಗಳೇನು?
- MUDA Case: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾದ ಹಿನ್ನೆಲೆ ತನಿಖಾಧಿಕಾರಿಗಳ ಕಾರ್ಯವೈಖರಿ ಏನು? ಸಿಎಂ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು? ಮುಖ್ಯಮಂತ್ರಿಗೆ ಎದುರಾಗುವ ಸವಾಲುಗಳೇನು? ಇಲ್ಲಿದೆ ವಿವರ.
Sat, 28 Sep 202409:51 AM IST
ಕರ್ನಾಟಕ News Live: ಮುಡಾ ಸೈಟ್ ಹಗರಣ; ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ನಾಲ್ಕು ತಂಡಗಳ ರಚನೆ, ಯಾರೆಲ್ಲಾ ಇದ್ದಾರೆ ತಂಡದಲ್ಲಿ?
- Muda Site Scam: ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಸಂಬಂಧಿಸಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಪ್ರಸ್ತುತ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
Sat, 28 Sep 202408:01 AM IST
ಕರ್ನಾಟಕ News Live: ಮಹಾಲಕ್ಷ್ಮೀ ಕೊಂದು 50 ಪೀಸ್ ಮಾಡಿ ಪ್ರಿಡ್ಜ್ನಲ್ಲಿಟ್ಟಿದ್ದೇಕೆ; ಆರೋಪಿ ಡೆತ್ನೋಟ್ನಲ್ಲಿತ್ತು ರೋಚಕ ಕಹಾನಿ!
- Mahalakshmi Murder Case: ಬೆಂಗಳೂರಿನಲ್ಲಿ ನಡೆದ ಮಹಾಲಕ್ಷ್ಮೀ ಹತ್ಯೆಗೆ ಸಂಬಂಧಿಸಿ ಕೊಲೆಗೆ ಕಾರಣ ಬಹಿರಂಗವಾಗಿದೆ. ಹತ್ಯೆಗೈದ ಆರೋಪಿ ಡೆತ್ನೋಟ್ನಲ್ಲಿ ವಿವರವಾಗಿ ಬರೆದಿಟ್ಟಿದ್ದಾನೆ. ಇಲ್ಲಿದೆ ನೋಡಿ ಅದರ ವಿವರ.
Sat, 28 Sep 202403:55 AM IST
ಕರ್ನಾಟಕ News Live: ವಿಜಯದಶಮಿಗೆ ವಿಶೇಷ ರೈಲು; ಬೆಂಗಳೂರಿನಿಂದ ಬೆಳಗಾವಿಗೆ ರೈಲುಗಳ ಸಂಚಾರದ ದಿನಾಂಕ, ಸಮಯ, ಟಿಕೆಟ್ ದರದ ವಿವರ ಹೀಗಿದೆ
- ಹಬ್ಬಗಳ ಸಂದರ್ಭದಲ್ಲಿ ರೈಲುಗಳಲ್ಲಿ ಜನದಟ್ಟಣೆ ಹೆಚ್ಚಿರುತ್ತೆ. ಈ ವೇಳೆ ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಿರಲು ನೈರುತ್ಯ ರೈಲ್ವೆ ಕ್ರಮ ಕೈಗೊಂಡಿದೆ. ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ. ದಿನಾಂಕ, ಸಮಯ ಮತ್ತು ಟಿಕೆಟ್ ದರ ತಿಳಿಯಿರಿ.
Sat, 28 Sep 202412:30 AM IST
ಕರ್ನಾಟಕ News Live: ತುಮಕೂರು-ಯಶವಂತಪುರ ಮೆಮು ರೈಲಿಗೆ ಸಚಿವ ವಿ ಸೋಮಣ್ಣ ಚಾಲನೆ; ಈ ರೈಲು ಓಡಾಟದ ಸಮಯ ಎಷ್ಟೊತ್ತಿಗೆ?
- Indian Railway: ಬೆಂಗಳೂರಿನ ಯಶವಂತಪುರ ಮತ್ತು ತುಮಕೂರು ಮಾರ್ಗವಾಗಿ ಸಂಚರಿಸುವ ನೂತನ ಮೆಮು ರೈಲಿಗೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರು ಚಾಲನೆ ನೀಡಿದ್ದಾರೆ.