Revanth Reddy: ತೆಲಂಗಾಣ ಚುನಾವಣಾ ಫಲಿತಾಂಶ, ಸಿಎಂ ರೇಸ್‌ನಲ್ಲಿ ಗಮನಸೆಳೆಯುತ್ತಿದ್ದಾರೆ ರೇವಂತ ರೆಡ್ಡಿ
ಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಎ. ರೇವಂತ ರೆಡ್ಡಿ ಕಾಮರೆಡ್ಡಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರನ್ನು ಸೋಲಿಸಿ ವೈಯಕ್ತಿಕ ದಾಖಲೆ ಬರೆಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ತೆಲಂಗಾಣದ ಮೂರನೇ ಮುಖ್ಯಮಂತ್ರಿಯಾಗುವತ್ತ ಗಮನಹರಿಸಿದ್ದಾರೆ.
ತೆಲಂಗಾಣ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಇತ್ತೀಚಿನ ಮಾಹಿತಿ (ಡಿ.3ರ ಅಪರಾಹ್ನ ) ಪ್ರಕಾರ ಕಾಂಗ್ರೆಸ್ , ಬಿಆರ್‌ಎಸ್, ಬಿಜೆಪಿ, ಎಐಎಂಐಎಂ, ಸಿಪಿಐ ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿವೆ. ಇದೇ ವೇಳೆ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಎ. ರೇವಂತ ರೆಡ್ಡಿ ಕಾಮರೆಡ್ಡಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರನ್ನು ಸೋಲಿಸಿ ವೈಯಕ್ತಿಕ ದಾಖಲೆ ಬರೆಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ತೆಲಂಗಾಣದ ಮೂರನೇ ಮುಖ್ಯಮಂತ್ರಿಯಾಗುವತ್ತ ಗಮನಹರಿಸಿದ್ದಾರೆ.
ರೇವಂತ ರೆಡ್ಡಿ ಅವರ ಕೋಡಂಗಲ್ಲು ಕ್ಷೇತ್ರದಿಂದಲೂ ಸ್ಪರ್ಧಿಸಿದ್ದು, ಅಲ್ಲೂ ಗೆಲುವಿನ ನಗೆ ಬೀರಲಿದ್ದಾರೆ. ಈ ನಡುವೆ, ಎ ರೇವಂತ ರೆಡ್ಡಿ ಮನೆ ಎದುರು ಮತ್ತು ಟಿಪಿಸಿಸಿ ಕಚೇರಿಯಲ್ಲಿ ಸಂಭ್ರಮಾಚರಣೆ ಶುರುವಾಗಿದೆ.
ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರೆ ಹಿರಿಯ ಕಾಂಗ್ರೆಸ್ ನಾಯಕರು ಸಂಭ್ರಮದಲ್ಲಿದ್ದು, ರೇವಂತ ರೆಡ್ಡಿ ಅವರಿಗೆ ಸಿಹಿ ತಿನ್ನಿಸಿದ ವಿಡಿಯೋಗಳು ಈಗ ಬಹಿರಂಗವಾಗಿವೆ.
ಎ ರೇವಂತ ರೆಡ್ಡಿ ಅವರು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿ) ಅಧ್ಯಕ್ಷರಾಗಿ 2021ರಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. 2017ರಲ್ಲಿ ಅವರು ತೆಲುಗದೇಶಂ ಪಾರ್ಟಿ (ಟಿಡಿಪಿ ) ಬಿಟ್ಟು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು.
ಎ ರೇವಂತ ರೆಡ್ಡಿ ಕುರಿತು ಗಮನಿಸಬೇಕಾದ 5 ಅಂಶಗಳು
1. ಮಲ್ಕಾಜ್‌ಗಿರಿಯ ಲೋಕ ಸಭಾ ಸದಸ್ಯರಾಗಿರುವ ಎ ರೇವಂತ ರೆಡ್ಡಿ ಅವರು ಆಂಧ್ರಪ್ರದೇಶದಲ್ಲಿ 2009ರ ಚುನಾವಣೆಯಲ್ಲಿ ಶಾಸಕರಾಗಿದ್ದರು. ಅದೇ ರೀತಿ 2014ರಲ್ಲಿ ತೆಲಂಗಾಣದ ಶಾಸಕರಾಗಿದ್ದರು.
2. ತೆಲಂಗಾಣದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಮುಖ್ಯಮಂತ್ರಿ ಕೆಸಿಆರ್ ವಿರುದ್ಧವೇ ಕಾಮರೆಡ್ಡಿ ಕಣಕ್ಕೆ ಇಳಿದು ಗೆಲುವು ಸಾಧಿಸುತ್ತಿರುವ ಕಾರಣ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
3. ಎ ರೇವಂತ ರೆಡ್ಡಿ ಅವರಿಗೆ 54 ವರ್ಷಯ ವಯಸ್ಸು. ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾಗಿ ಅವರ ಕಾರ್ಯಶೈಲಿ ಪಕ್ಷದೊಳಗಿನ ಟೀಕಾಕಾರರ ಬಾಯಿಯನ್ನೂ ಮುಚ್ಚಿಸಿದೆ.
4. ಪಕ್ಷದೊಳಗಿನ ಬಂಡಾಯಕಾರರ ವಿರೋಧದ ನಡುವೆಯೂ ಪಕ್ಷದ ವರಿಷ್ಠರು ರೇವಂತ ರೆಡ್ಡಿ ಮೇಲೆ ವಿಶ್ವಾಸವಿರಿಸಿದ್ದರು. ಪಕ್ಷದ ವೇದಿಕೆಗಳಲ್ಲಿ ರೇವಂತ ರೆಡ್ಡಿ ಅವರನ್ನು ದೊಡ್ಡ ನಾಯಕರೆಂದು ಬಿಂಬಿಸಲಾಗಿತ್ತು. ರಾಜ್ಯ ಚುನಾವಣೆ ಪ್ರಚಾರ ಸಭೆಗಳಲ್ಲಿ ಅವರ ಮಾತುಗಳಿಗೆ ಗ್ರಾಮೀಣ ಭಾಗಗಳ ಜನರು ಸ್ಪಂದಿಸಿದ್ದರು.
5. ರೇವಂತ ರೆಡ್ಡಿ ಅವರು ಬಿಆರ್‌ಎಸ್ ಭದ್ರಕೋಟೆಯಾಗಿರುವ ಕಾಮರೆಡ್ಡಿಯಲ್ಲಿ ಕೆಸಿಆರ್ ವಿರುದ್ಧ ಸ್ಪರ್ಧಿಸಿ, ತಾನು ಸಿಎಂ ರೇಸ್‌ನ ಮುಂಚೂಣಿಯಲ್ಲಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಪಕ್ಷವೂ ಪರೋಕ್ಷವಾಗಿ ರೇವಂತ ರೆಡ್ಡಿ ಅವರನ್ನೇ ಸಿಎಂ ಫೇಸ್ ಆಗಿ ಪ್ರತಿಬಿಂಬಿಸಿದೆ.
ವಿಭಾಗ