Entertainment News in Kannada Live September 11, 2024: ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್‌ ಮೇಲ್;‌ ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ ವಿರುದ್ಧ ದೂರು-entertainment news in kannada today live september 11 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 11, 2024: ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್‌ ಮೇಲ್;‌ ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ ವಿರುದ್ಧ ದೂರು

ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್‌ ಮೇಲ್;‌ ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ ವಿರುದ್ಧ ದೂರು

Entertainment News in Kannada Live September 11, 2024: ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್‌ ಮೇಲ್;‌ ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ ವಿರುದ್ಧ ದೂರು

12:05 PM ISTSep 11, 2024 05:35 PM HT Kannada Desk
  • twitter
  • Share on Facebook
12:05 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Wed, 11 Sep 202412:05 PM IST

ಮನರಂಜನೆ News in Kannada Live:ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್‌ ಮೇಲ್;‌ ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ ವಿರುದ್ಧ ದೂರು

  • Brundavana Serial Actor Varun Aradhya: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬೃಂದಾವನ ಸೀರಿಯಲ್‌ ನಟ ವರುಣ್‌ ಆರಾಧ್ಯ ವಿರುದ್ಧ ಕೇಸ್‌ ದಾಖಲಾಗಿದೆ. ಯುವತಿಯೊಬ್ಬರ ಖಾಸಗಿ ಫೋಟೋಗಳನ್ನಿಟ್ಟುಕೊಂಡು ಬ್ಲಾಕ್‌ ಮೇಲ್‌ ಮಾಡುತ್ತಿದ್ದ ಆರೋಪ ಎದುರಿಸುತ್ತಿದ್ದಾರೆ ನಟ ವರುಣ್.‌     
Read the full story here

Wed, 11 Sep 202410:13 AM IST

ಮನರಂಜನೆ News in Kannada Live:ಉದ್ದ ಗಡ್ಡ ಬಿಟ್ಟು Ellige Payana Yavudo Daari ಎಂದ ಅಭಿಮನ್ಯು; ಅಷ್ಟಕ್ಕೂ ಹಿಂಗ್ಯಾಕಾದ್ರು ಸ್ಟಾರ್‌ ನಿರ್ದೇಶಕ ಕಾಶಿನಾಥ್‌ ಪುತ್ರ

  • Ellige Payana Yavudo Daari Teaser: ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಕಾಶಿನಾಥ್‌ ಅವರ ಪುತ್ರ ಅಭಿಮನ್ಯು ಕಾಶಿನಾಥ್‌ ಇದೀಗ ಹೊಸ ಸಿನಿಮಾ ಮೂಲಕ ಆಗಮಿಸಿದ್ದಾರೆ. ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ಟೀಸರ್‌ ಹೊತ್ತು ಬಂದಿದ್ದಾರೆ. 
Read the full story here

Wed, 11 Sep 202409:40 AM IST

ಮನರಂಜನೆ News in Kannada Live:ಸೆಪ್ಟೆಂಬರ್‌ 12ಕ್ಕೆ ತೆರೆ ಕಾಣ್ತಿದೆ ಟೈಟಲ್‌ ಸಾಂಗ್‌ ಮೂಲಕ ಗಮನ ಸೆಳೆದಿದ್ದ ಕಿರಣ್‌ ರಾಜ್‌ ಅಭಿನಯದ ರಾನಿ ಸಿನಿಮಾ

  • ಕಿರಣ್‌ ರಾಜ್‌ ಅಭಿನಯದ ರಾನಿ ಸಿನಿಮಾ ಸೆಪ್ಟೆಂಬರ್‌ 12, ಗುರುವಾರ ತೆರೆ ಕಾಣುತ್ತಿದೆ. ಸದ್ಯಕ್ಕೆ ಕಿರಣ್‌ ರಾಜ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಸಿನಿಪ್ರಿಯರು ಹಾರೈಸುತ್ತಿದ್ದಾರೆ. ಇತ್ತೀಚೆಗೆ ರಾನಿ ಸಿನಿಮಾ ಟೈಟಲ್‌ ಹಾಡು ಬಿಡುಗಡೆಯಾಗಿತ್ತು. 

Read the full story here

Wed, 11 Sep 202409:15 AM IST

ಮನರಂಜನೆ News in Kannada Live:ಅಕ್ಟೋಬರ್‌ನಲ್ಲಿ ಒಟಿಟಿಗೆ ಎಂಟ್ರಿ ಕೊಡಲಿದ್ಯಾ ಲಾಫಿಂಗ್‌ ಬುದ್ಧ? ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ ಪ್ರಮೋದ್‌ ಶೆಟ್ಟಿ ಚಿತ್ರ?

  • ಆಗಸ್ಟ್‌ 30 ರಂದು ತೆರೆ ಕಂಡ ಪ್ರಮೋದ್‌ ಶೆಟ್ಟಿ ಅಭಿನಯದ ಲಾಫಿಂಗ್‌ ಬುದ್ಧ ಸಿನಿಮಾ ಅಕ್ಟೋಬರ್‌ನಲ್ಲಿ ಒಟಿಟಿಗೆ ಬರಲಿದೆ. ದಿನಾಂಕ ಹಾಗೂ ಪ್ಲಾಟ್‌ಫಾರ್ಮ್‌ ಬಗ್ಗೆ ಚಿತ್ರತಂಡ ಶೀಘ್ರದಲ್ಲೇ ಮಾಹಿತಿ ಹಂಚಿಕೊಳ್ಳಲಿದೆ. ಚಿತ್ರವನ್ನು ರಿಷಬ್‌ ಶೆಟ್ಟಿ ನಿರ್ಮಿಸಿದ್ದು ಭರತ್‌ ರಾಜ್‌ ನಿರ್ದೇಶನ ಮಾಡಿದ್ದಾರೆ. 

Read the full story here

Wed, 11 Sep 202408:15 AM IST

ಮನರಂಜನೆ News in Kannada Live:Malaika Arora: ಬಹುಮಹಡಿ ಕಟ್ಟಡದಿಂದ ಜಿಗಿದು ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಅನಿಲ್‌ ಅರೋರಾ ಆತ್ಮಹತ್ಯೆ

  • ನಟಿ ಮಲೈಕಾ ಅರೋರಾ ಕುಟುಂಬದಿಂದ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಮಲೈಕಾ ಅರೋರಾ ಅವರ ತಂದೆ ಅನಿಲ್‌ ಅರೋರಾ ನಿಧನರಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಬಹುಮಹಡಿ ಮನೆಯ ಆರನೇ ಪ್ಲೋರ್‌ನಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Read the full story here

Wed, 11 Sep 202407:41 AM IST

ಮನರಂಜನೆ News in Kannada Live:ಕನ್ನಡದಲ್ಲಿ ಕಾಲಾಪತ್ಥರ್‌, ರೋನಿ ಜತೆಗೆ ವಿಕಾಸ ಪರ್ವ, ಮಲಯಾಳಂನ ARM; ಈ ವಾರ ಚಿತ್ರಮಂದಿರಕ್ಕೆ ಯಾವೆಲ್ಲ ಸಿನಿಮಾಗಳು?

  • Kannada Movies Releasing This Week: ಕನ್ನಡದಲ್ಲಿ ಈ ವಾರ ರೋನಿ, ಕಾಲಾಪತ್ಥರ್‌, ವಿಕಾಸಪರ್ವ ಸೇರಿ ಒಟ್ಟು ಐದು ಸಿನಿಮಾಗಳು ತೆರೆಗೆ ಬರಲಿವೆ. ಆ ಐದರ ಜತೆಗೆ ಮಲಯಾಳಂನ ARM ಪ್ಯಾನ್‌ ಇಂಡಿಯಾ ಚಿತ್ರ ಕನ್ನಡಕ್ಕೆ ಡಬ್‌ ಆಗಿ ರಿಲೀಸ್‌ ಆಗುತ್ತಿದೆ. ಇಲ್ಲಿದೆ ನೋಡಿ ಈ ವಾರ ತೆರೆಗೆ ಬರಲಿರುವ ಸಿನಿಮಾಗಳ ಪಟ್ಟಿ. 
Read the full story here

Wed, 11 Sep 202406:37 AM IST

ಮನರಂಜನೆ News in Kannada Live:Seetha Rama Serial: ಕಣ್ಣೆದುರೇ ಇದೆ ಸಿಹಿ ಸತ್ಯ; ಸೀತಾ ಭಯಕ್ಕೂ, ಮೇಘಶ್ಯಾಮನ ಬಯಕೆಗೂ ಕಾರಣ ಒಂದೇ!

  • Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲೀಗ ಸಿಹಿ ಜನ್ಮ ರಹಸ್ಯ ವೀಕ್ಷಕರಿಗೆ ಕುತೂಹಲ ಮೂಡಿಸಿದೆ. ಸಿಹಿ ಮೇಘಶ್ಯಾಮನ ಮಗಳೇ ಎಂಬ ವಿಚಾರ ಸೀತಾಗೆ ಗೊತ್ತಾಗಿದೆ. ಇತ್ತ ರಾಮನ ಮನೆಗೆ ಶ್ಯಾಮ್‌ ದಂಪತಿಯ ಆಗಮನವೂ ಆಗಿದೆ. 
Read the full story here

Wed, 11 Sep 202406:23 AM IST

ಮನರಂಜನೆ News in Kannada Live:18 ಗಂಟೆಗಳಲ್ಲಿ 9 ಮಿಲಿಯನ್‌ ವ್ಯೂವ್ಸ್ ಪಡೆದ ದೇವರ ಟ್ರೇಲರ್‌; ಸಿನಿಮಾ ಯಾರೂ ಮಿಸ್‌ ಮಾಡ್ಕೊಬೇಡಿ ಎಂದ ಫ್ಯಾನ್ಸ್‌

  • ತೆಲುಗು ಅಭಿಮಾನಿಗಳು ಬಹಳ ದಿನಗಳಿಂದ ಕಾಯುತಿದ್ದ ದೇವರ ಸಿನಿಮಾ ಟ್ರೇಲರ್‌ ಬಿಡುಗಡೆ ಅಗಿದೆ. ಬಿಡುಗಡೆಯಾಗಿ 18 ಗಂಟೆಗಳಲ್ಲಿ 9 ಮಿಲಿಯನ್‌ಗೂ ಹೆಚ್ಚು ವ್ಯೂವ್ಸ್‌ ಪಡೆದುಕೊಂಡಿದೆ. ಸೆಪ್ಟೆಂಬರ್‌ 27ಕ್ಕೆ ಸಿನಿಮಾ ತೆರೆ ಕಾಣುತ್ತಿದೆ. ಜ್ಯೂ ಎನ್‌ಟಿಆರ್‌, ಸೈಫ್‌ ಅಲಿ ಖಾನ್‌, ಜಾನ್ವಿ ಕಪೂರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

Read the full story here

Wed, 11 Sep 202404:48 AM IST

ಮನರಂಜನೆ News in Kannada Live:ಹಬ್ಬ ಮುಗಿದ್ರೂ ನಿಲ್ಲದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಗಣೇಶೋತ್ಸವ! ಈ ಒಟಿಟಿಗೆ ಆಗಮಿಸುವ ಸನಿಹದಲ್ಲಿ Krishnam Pranaya Sakhi

  • Krishnam Pranaya Sakhi OTT: ಗೋಲ್ಡನ್ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ? ಯಾವ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಿಸಬಹುದು? ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿರುವ ಈ ಸಿನಿಮಾದ ಒಟಿಟಿ ಬಿಡುಗಡೆಯ ಅಪ್‌ಡೇಟ್‌ ಇಲ್ಲಿದೆ. 
Read the full story here

Wed, 11 Sep 202404:21 AM IST

ಮನರಂಜನೆ News in Kannada Live:Annayya Serial: ಅಪ್ಪನ ಕಣ್ತಪ್ಪಿಸಿ ಶಿವು ಸಹಾಯ ಪಡೆದು ಮೆಡಿಕಲ್ ಕ್ಯಾಂಪ್‌ಗೆ ಹೋದ ಪಾರು, ಮುಂದಾಗಿದ್ದೇನು ನೋಡಿ

  • Annayya Serial Kannada: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಪಾರು ಅಪ್ಪನ ಕಣ್ತಪ್ಪಿಸಿ ಶಿವು ಸಹಾಯ ಪಡೆದು ಮೆಡಿಕಲ್ ಕ್ಯಾಂಪ್‌ಗೆ ಹೋಗಿದ್ದಾಳೆ. ಅಷ್ಟೇ ಅಲ್ಲ ಯಾರೋ ಹೊಸ ವ್ಯಕ್ತಿಯ ಪರಿಚಯವನ್ನು ಅವಳು ಈಗ ಶಿವುಗೆ ಮಾಡಿಸಲಿದ್ದಾಳೆ. 
Read the full story here

Wed, 11 Sep 202404:00 AM IST

ಮನರಂಜನೆ News in Kannada Live:ಮನೆಯವರ ಮುಂದೆ ಮಗನ ನಾಟಕ, ಸೊಸೆಗೆ ಮಾಡಿದ ಮೋಸ ನೆನೆದು ಕಣ್ಣೀರಿಟ್ಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಮಂಗಳವಾರದ ಸಂಚಿಕೆ. ಮುದ್ದಾದ ಮಕ್ಕಳು, ಚಿನ್ನದಂಥ ಸೊಸೆ ಇದ್ದರೂ ಮಗ 2ನೇ ಮದುವೆ ಆಗಲು ಹೊರಟಿರುವ ವಿಚಾರ ತಿಳಿದು ಕುಸುಮಾ ಗಾಬರಿ ಆಗುತ್ತಾಳೆ. ಮದುವೆ ಹೇಗೆ ನಿಲ್ಲಿಸುವುದು ಎಂದು ತಿಳಿಯದೆ ಕುಸುಮಾ ಪೇಚಾಡುತ್ತಾಳೆ. 

Read the full story here

Wed, 11 Sep 202403:49 AM IST

ಮನರಂಜನೆ News in Kannada Live:ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ.. ಹಾಗಾದ್ರೆ ನಿರೂಪಕರೂ ಹೊಸಬ್ರಾ? ಅಚ್ಚರಿಗೆ ದೂಡಿದೆ Bigg Boss Kannada Season 11 ಪ್ರೋಮೋ

  • Bigg Boss Kannada Season 11 Promo: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಮೊದಲ ಪ್ರೋಮೋ ಬಿಡುಗಡೆ ಆಗಿದೆ. ಹಲವು ಕುತೂಹಲಗಳಿಗೆ ಈ ಪ್ರೋಮೋ ಸಾಕ್ಷಿಯಾಗಿದೆ. ಅದರಲ್ಲೂ ಕಿಚ್ಚ ಸುದೀಪ್‌ ಈ ಹೊಸ ದಶಕದ ಹೊಸ ಅಧ್ಯಾಯವನ್ನು ಹೋಸ್ಟ್‌ ಮಾಡ್ತಾರಾ ಅನ್ನೋ ಪ್ರಶ್ನೆಯೂ ಹೊರಬಂದ ಪ್ರೋಮೋದಲ್ಲಿ ಕಂಡಿದೆ. 
Read the full story here

Wed, 11 Sep 202403:18 AM IST

ಮನರಂಜನೆ News in Kannada Live:ಅಜ್ಜಿ ಕಂಡು ಶ್ರಾವಣಿ ಕಣ್ಣಲ್ಲಿ ಆನಂದಬಾಷ್ಪ, ವಿಜಯಾಂಬಿಕಾಗೆ ಭೂತದ ಕಾಟ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • Shravani Subramanya Kannada Serial Today Episode September 10th: ಅಜ್ಜಿ ನೋಡುವ ತವಕದಲ್ಲಿ ತುದಿಗಾಲಲ್ಲಿ ನಿಂತ ಶ್ರಾವಣಿಗೆ ಕೊನೆಗೂ ಸಿಕ್ತು ಅಜ್ಜಿಯನ್ನು ಭೇಟಿಯಾಗುವ ಅವಕಾಶ. ಲಲಿತಾದೇವಿಯ ಮುಂದೆ ಕೈ ಮುಗಿದು ಕ್ಷಮೆ ಕೇಳಿದ ವೀರೇಂದ್ರ. ವಿಜಯಾಂಬಿಕಾಗೆ ಯಜಮಾನರ ಕೋಣೆಯಲ್ಲಿ ಭೂತದ ಕಾಟ.
Read the full story here

Wed, 11 Sep 202403:07 AM IST

ಮನರಂಜನೆ News in Kannada Live:ರಾನಿ ಸಿನಿಮಾ ನಾಯಕ ಕಿರಣ್‌ ರಾಜ್‌ ಕಾರು ಅಪಘಾತ, ಎದೆ ಭಾಗಕ್ಕೆ ಪೆಟ್ಟು; ಚಿಕಿತ್ಸೆ ನೀಡುತ್ತಿರುವ ವೈದ್ಯರು

  • ರಾನಿ ಸಿನಿಮಾ ನಟ ಕಿರಣ್‌ ರಾಜ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಕಿರಣ್‌ ರಾಜ್‌ ಅಭಿನಯದ ರಾನಿ ಸಿನಿಮಾ ನಾಳೆ(ಸೆಪ್ಟೆಂಬರ್‌ 12) ತೆರೆ ಕಾಣುತ್ತಿದೆ. ಸಿನಿಮಾ ಬಿಡುಗಡೆಗೆ ಒಂದು ದಿನ ಇರುವಾಗಲೇ ಈ ಘಟನೆ ಸಂಭವಿಸಿದೆ. ಕಿರಣ್‌ ರಾಜ್‌ ಎದೆ ಭಾಗಕ್ಕೆ ಪೆಟ್ಟು ಬಿದಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. 

Read the full story here

Wed, 11 Sep 202401:52 AM IST

ಮನರಂಜನೆ News in Kannada Live:ರಕ್ಷಿತ್‌ ಶೆಟ್ಟಿ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲಿ ಒಟಿಟಿಗೆ ಬರೋದು ಯಾವಾಗ? ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ?

  • ರಕ್ಷಿತ್‌ ಶೆಟ್ಟಿ ನಿರ್ಮಾಣದಲ್ಲಿ ಚಂದ್ರಜಿತ್‌ ಬೆಳ್ಳಿಯಪ್ಪ ಆಕ್ಷನ್‌ ಕಟ್‌ ಹೇಳಿದ್ದ ಇಬ್ಬನಿ ತಬ್ಬಿದ ಇಳೆಯಲಿ ಸೆಪ್ಟೆಂಬರ್‌ 5 ರಂದು ಚಿತ್ರಮಂದಿಗಳಲ್ಲಿ ತೆರೆ ಕಂಡಿತ್ತು. ಇದೀಗ ಈ ಸಿನಿಮಾ ಒಟಿಟಿ ಎಂಟ್ರಿ ಯಾವಾಗ ಎಂಬ ಕುತೂಹಲ ಸಿನಿಪ್ರಿಯರಿಗೆ ಕಾಡುತ್ತಿದೆ. ಸಿನಿಮಾ ಅಕ್ಟೋಬರ್‌ ಎರಡನೇ ವಾರದಲ್ಲಿ ಒಟಿಟಿಯಲ್ಲಿ ಪ್ರಸಾರವಾಗಬಹುದು ಎಂಬ ಮಾತು ಕೇಳಿಬರುತ್ತಿದೆ. 

Read the full story here

Wed, 11 Sep 202412:38 AM IST

ಮನರಂಜನೆ News in Kannada Live:ನಾನು ಈಗಾಗಲೇ ಬಹಳ ಸಾರಿ ಮದುವೆ ಆಗಿದ್ದೇನೆ; ತಮ್ಮ ಮದುವೆ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ಸ್ಯಾಂಡಲ್‌ವುಡ್‌ ನಟಿ ರಮ್ಯಾ

  • ತಮ್ಮ ಮದುವೆ ಸುದ್ದಿ ಬಗ್ಗೆ ಸ್ಯಾಂಡಲ್‌ವುಡ್‌ ನಟಿ ರಮ್ಯಾ ಸ್ಪಷ್ಟನೆ ಕೊಟ್ಟಿದ್ದಾರೆ. ದಯವಿಟ್ಟು ನನ್ನನ್ನು ಕೇಳದೆ ಯಾವುದೇ ಸುದ್ದಿ ಬರೆಯಬೇಡಿ, ಒಂದು ವೇಳೆ ನಾನು ಮದುವೆ ಆಗುವುದಿದ್ದರೆ ಖಂಡಿತ ನಿಮಗೆ ಹೇಳುತ್ತೇನೆ. ಯಾವುದೋ ಗೊತ್ತಿಲ್ಲದ ಮೂಲಗಳಿಂದ ಸುದ್ದಿ ಸಂಗ್ರಹಿಸಬೇಡಿ ಎಂದು ಹೇಳುವ ಮೂಲಕ ರಮ್ಯಾ ತಮ್ಮ ಮದುವೆ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

Read the full story here