ಲೋಕಸಭಾ ಫಲಿತಾಂಶ 2024 ; ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ ಗೆದ್ದವರ ಪಕ್ಷವಾರು ಸಂಪೂರ್ಣ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಫಲಿತಾಂಶ 2024 ; ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ ಗೆದ್ದವರ ಪಕ್ಷವಾರು ಸಂಪೂರ್ಣ ವಿವರ

ಲೋಕಸಭಾ ಫಲಿತಾಂಶ 2024 ; ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ ಗೆದ್ದವರ ಪಕ್ಷವಾರು ಸಂಪೂರ್ಣ ವಿವರ

ಲೋಕಸಭಾ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ವಿಜೇತರ ವಿವರ ಕೂಡ ಲಭ್ಯವಾಗುತ್ತಿದ್ದು, ಯಾವ ಕ್ಷೇತ್ರದಲ್ಲಿ ಯಾರು ಗೆಲುವು ಸಾಧಿಸಿದ್ದಾರೆ. ಪಕ್ಷವಾರು ಸ್ಥಾನಗಳ ಸಂಖ್ಯೆ ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ.

ಲೋಕಸಭಾ ಫಲಿತಾಂಶ 2024 ; ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ ಗೆದ್ದವರ ಪಕ್ಷವಾರು ಸಂಪೂರ್ಣ ವಿವರ (ಸಾಂಕೇತಿಕ ಚಿತ್ರ)
ಲೋಕಸಭಾ ಫಲಿತಾಂಶ 2024 ; ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ ಗೆದ್ದವರ ಪಕ್ಷವಾರು ಸಂಪೂರ್ಣ ವಿವರ (ಸಾಂಕೇತಿಕ ಚಿತ್ರ)

ಬೆಂಗಳೂರು: ಲೋಕಸಭಾ ಚುನಾವಣೆ 2024 ರ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ 28 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಬಿಜೆಪಿ, 7 ರಲ್ಲಿ ಕಾಂಗ್ರೆಸ್ ಮತ್ತು 3 ರಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದೆ. ಈ 28 ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಇಂದು (ಜೂನ್ 4) ಬೆಳಗ್ಗೆ 8 ಗಂಟೆಗೆ ಶುರುವಾಗಿದೆ.

ಸದ್ಯದ ಟ್ರೆಂಡ್ ಪ್ರಕಾರ, ಕಳೆದ ಸಲದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಸಲ ಬಿಜೆಪಿಗೆ ಹಿನ್ನಡೆಯಾಗಿದೆ. ಕಳೆದ ಬಾರಿ 25 ಸ್ಥಾನಗಳಲ್ಲಿ ಗೆಲುವು ಕಂಡಿದ್ದ ಬಿಜೆಪಿ ಈ ಬಾರಿ ಏಳು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಕಂಡುಬಂದಿದೆ. ಮಿತ್ರ ಪಕ್ಷ ಜೆಡಿಎಸ್ 3 ಸ್ಥಾನಗಳಲ್ಲಿ ಗೆಲುವು ದಾಖಲಿಸಿದರೆ ಆಗ ಎನ್‌ಡಿಎ ಸಂಖ್ಯಾಬಲ 21 ಆಗಲಿದೆ.

ಕರ್ನಾಟಕದಲ್ಲಿ ಕಳೆದ ವರ್ಷ ವಿಧಾನಸಭಾ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ ಆಡಳಿತ ಚುಕ್ಕಾಣಿ ಹಿಡಿದೆ. ವಿಧಾನ ಸಭಾ ಚುನಾವಣೆಗೆ 5 ಗ್ಯಾರೆಂಟಿಗಳ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಅದನ್ನು ಲೋಕಸಭೆ ಚುನಾವಣೆಗೂ ಮೊದಲೇ ಜಾರಿಗೊಳಿಸಿ, ಅದರ ಆಧಾರದ ಮೇಲೆಯೇ ರಾಜ್ಯದಲ್ಲಿ ಮತ್ತು ದೇಶದದಲ್ಲಿ ಚುನಾವಣೆ ಎದುರಿಸಿತ್ತು. ಬಿಜೆಪಿ ಮೋದಿ ಗ್ಯಾರೆಂಟಿ ವಿಚಾರ ಮುಂದಿಟ್ಟು ಕರ್ನಾಟಕದ ಮತದಾರರನ್ನು ಒಲಿಸಲು ಪ್ರಯತ್ನಿಸಿತ್ತು.

ಲೋಕಸಭಾ ಚುನಾವಣೆ 2024 ಫಲಿತಾಂಶ; ಕರ್ನಾಟಕದ ವಿಜೇತರ ಪೂರ್ಣ ವಿವರ

ಕ್ಷೇತ್ರವಿಜೇತ ಅಭ್ಯರ್ಥಿಪಕ್ಷ
ಚಿಕ್ಕೋಡಿ  
ಬೆಳಗಾವಿ  
ಬಾಗಲಕೋಟೆ  
ವಿಜಯಪುರ (ಎಸ್‌ಸಿ)  
ಕಲುಬರಗಿ (ಎಸ್‌ಸಿ)  
ರಾಯಚೂರು (ಎಸ್‌ಟಿ)  
ಬೀದರ್  
ಕೊಪ್ಪಳ   
ಬಳ್ಳಾರಿ (ಎಸ್‌ಟಿ)  
ಹಾವೇರಿ  
ಧಾರವಾಡ  
ಉತ್ತರ ಕನ್ನಡ  
ದಾವಣಗೆರೆ  
ಶಿವಮೊಗ್ಗ  
ಉಡುಪಿ-ಚಿಕ್ಕಮಗಳೂರು  
ಹಾಸನ  
ದಕ್ಷಿಣ ಕನ್ನಡ  
ಚಿತ್ರದುರ್ಗ (ಎಸ್‌ಸಿ)  
ತುಮಕೂರು  
ಮಂಡ್ಯ  
ಮೈಸೂರು  
ಚಾಮರಾಜನಗರ (ಎಸ್‌ಸಿ)  
ಬೆಂಗಳೂರು ಗ್ರಾಮಾಂತರ  
ಬೆಂಗಳೂರು ಉತ್ತರ  
ಬೆಂಗಳೂರು ಸೆಂಟ್ರಲ್  
ಬೆಂಗಳೂರು ದಕ್ಷಿಣ  
ಚಿಕ್ಕಬಳ್ಳಾಪುರ  
ಕೋಲಾರ  

ಕರ್ನಾಟಕದಲ್ಲಿ ಬಿಜೆಪಿಗೆ ಆಂತರಿಕ ಕಚ್ಚಾಟಗಳು ಮುಳುವಾಗಿದ್ದು, ಬಂಡಾಯ ಅಭ್ಯರ್ಥಿಗಳನ್ನು ಕಣದಲ್ಲಿ ಎದುರಿಸಬೇಕಾಗಿ ಬಂತು. ಜೆಡಿಎಸ್ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು, ಲೆಕ್ಕಾಚಾರದಂತೆ ಮುನ್ನಡೆಯಲ್ಲಿದೆ.

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಒಂದು ಹಂತದಲ್ಲಿ, ಇನ್ನುಳಿದ 14 ಕ್ಷೇತ್ರಗಳಿಗೆ ಇನ್ನೊಂದು ಹಂತದಲ್ಲಿ ಮತದಾನ ನಡೆಯಿತು. ಮೊದಲ ಹಂತದ ಚುನಾವಣೆ ಏಪ್ರಿಲ್ 26 ರಂದು ನಡೆದರೆ, ಎರಡನೆ ಹಂತದ ಚುನಾವಣೆ ಮೇ 7 ರಂದು ನಡೆಯಿತು.

ಕರ್ನಾಟಕದ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್‌, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಿತು.

ಕರ್ನಾಟಕದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಎರಡನೆ ಹಂತದಲ್ಲಿ ಮತದಾನ ನಡೆಯಿತು.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

Whats_app_banner