ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live September 17, 2024 : ಕಲ್ಯಾಣ ಕರ್ನಾಟಕದ 'ಕಲ್ಯಾಣ'ಕ್ಕೆ ಸಿದ್ಧಿಸಿದ ಫಲ; 11,770 ಕೋಟಿ ರೂಪಾಯಿ ಯೋಜನೆಗಳಿಗೆ ಅನುಮೋದನೆ, ಪ್ರತ್ಯೇಕ ಸಚಿವಾಲಯ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 17 Sep 202403:30 PM IST
ಕರ್ನಾಟಕ News Live: ಕಲ್ಯಾಣ ಕರ್ನಾಟಕದ 'ಕಲ್ಯಾಣ'ಕ್ಕೆ ಸಿದ್ಧಿಸಿದ ಫಲ; 11,770 ಕೋಟಿ ರೂಪಾಯಿ ಯೋಜನೆಗಳಿಗೆ ಅನುಮೋದನೆ, ಪ್ರತ್ಯೇಕ ಸಚಿವಾಲಯ
- ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ 11,770 ಕೋಟಿ ರೂಪಾಯಿ ಯೋಜನೆಗಳಿಗೆ ಅನುಮೋದನೆ ನೀಡಿದೆ. ಬೀದರ್ ಹಾಗೂ ರಾಯಚೂರು ನಗರ ಸಭೆಗಳನ್ನು ಮಹಾನಗರ ಪಾಲಿಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ನಿರ್ಣಯಿಸಲಾಗಿದೆ.
Tue, 17 Sep 202401:33 PM IST
ಕರ್ನಾಟಕ News Live: ಶಾಸಕ ಮುನಿರತ್ನ ಸೆ 30ರವರೆಗೆ ನ್ಯಾಯಾಂಗ ಬಂಧನ, ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್; ನಾಳೆ ಜಾಮೀನು ಅರ್ಜಿ ವಿಚಾರಣೆ
- ಜಾತಿ ನಿಂದನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಮುನಿರತ್ನ ಅವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 30ರ ತನಕ ವಿಸ್ತರಿಸಲಾಗಿದೆ. ಆದರೆ ಜಾಮೀನು ಅರ್ಜಿ ವಿಚಾರಣೆ ನಾಳೆಗೆ (ಸೆಪ್ಟೆಂಬರ್ 18) ಮುಂದೂಡಲಾಗಿದೆ. (ವರದಿ-ಎಚ್. ಮಾರುತಿ)
Tue, 17 Sep 202401:08 PM IST
ಕರ್ನಾಟಕ News Live: ಕಾಡಿನ ಕಥೆಗಳು: ಹವಾಮಾನ ವೈಪರಿತ್ಯ ಪರಿಣಾಮ ಎಲ್ಲಿಗೆ ಬಂತು ನೋಡಿ, ಆಫ್ರಿಕಾದಲ್ಲಿ ಆನೆ ಮಾತ್ರವಲ್ಲ ನೀರಾನೆ, ಜೀಬ್ರಾ, ಕಾಡು ಕೋಣದ ಆಹಾರವೂ ರೆಡಿ
ಹವಾಮಾನ ವೈಪರಿತ್ಯದ ಪರಿಣಾಮವಾಗಿ ಸೃಷ್ಟಿಯಾಗಿರುವ ಭೀಕರ ಬರಗಾಲ ಆಫ್ರಿಕಾದ ಕಾಡು ಹಾಗೂ ಕಾಡು ಪ್ರಾಣಿಗಳನ್ನು ತಟ್ಟುತ್ತಿದೆ. ಆನೆ ಸಹಿತ ಹಲವು ವನ್ಯಜೀವಿಗಳನ್ನು ಆಹಾರವಾಗಿ ನೀಡುವುದಾಗಿ ಅಲ್ಲಿನ ದೇಶಗಳು ಹೇಳುತ್ತಿವೆ. ಏನಿದರ ಹಿಂದಿರುವ ಮರ್ಮ ಎನ್ನುವುದು ಈ ವಾರದ ಕಾಡಿನ ಕಥೆಗಳ ಸಾರ.
Tue, 17 Sep 202412:32 PM IST
ಕರ್ನಾಟಕ News Live: ದಾಸನಿಗಿಲ್ಲ ಬಿಡುಗಡೆ ಭಾಗ್ಯ, ಇನ್ನೂ 13 ದಿನ ಸೆರೆವಾಸ: ಬಳ್ಳಾರಿಯಲ್ಲಿ ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮೀ
- ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಸೇರಿದಂತೆ 17 ಆರೋಪಿಗಳಇಗೆ ಬೆಂಗಳೂರು ನ್ಯಾಯಾಲಯ ಸೆಪ್ಟೆಂಬರ್ 30ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. (ವರದಿ-ಎಚ್.ಮಾರುತಿ)
Tue, 17 Sep 202411:29 AM IST
ಕರ್ನಾಟಕ News Live: ಮೆಟ್ರೋ ಸ್ಟೇಷನ್ನೋ, ಸೂಸೈಡ್ ಸ್ಪಾಟ್ಟೋ; ಮತ್ತೊಬ್ಬ ಆತ್ಮಹತ್ಯೆಗೆ ಯತ್ನ, ಸ್ವಲ್ಪದರಲ್ಲೇ ಬಚಾವ್, VIDEO
- ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅವಘಡಗಳು ಮುಂದುವರೆದಿವೆ. 30 ವರ್ಷದ ಯುವಕನೊಬ್ಬ ಮೆಟ್ರೋ ಟ್ರೈನ್ ಬರುತ್ತಿದ್ದಂತೆ ಟ್ರ್ಯಾಕ್ಗೆ ಹಾಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜ್ಞಾನಭಾರತಿ ಮೆಟ್ರೋ ಸ್ಟೇಷನ್ನಲ್ಲಿ ನಡೆದಿದೆ.
Tue, 17 Sep 202411:01 AM IST
ಕರ್ನಾಟಕ News Live: ಅಂಬಾರಿ ಉತ್ಸವ; ಬೆಂಗಳೂರಿನಿಂದ ಒಡಿಶಾದ ಪುರಿ ಜಗನ್ನಾಥನ ದರ್ಶನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಶೀಘ್ರ ಆರಂಭ
- ಕೆಎಸ್‌ಆರ್‌ಟಿಸಿಯು ಯುರೋಪಿಯನ್ ಶೈಲಿಯ ಹೈಟೆಕ್ 'ಅಂಬಾರಿ ಉತ್ಸವ' ಎಸಿ ಬಸ್ ಸೇವೆಯನ್ನು ಬೆಂಗಳೂರಿನಿಂದ ಒಡಿಶಾದ ಪುರಿಗೆ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಲಿದೆ.
Tue, 17 Sep 202410:15 AM IST
ಕರ್ನಾಟಕ News Live: ಗೂಗಲ್ ಟ್ರಾನ್ಸ್‌ಲೇಟ್ ಬಳಸಿ ಕನ್ನಡ ಬರೆದು ಪೌರಕಾರ್ಮಿಕರಿಗೆ ನೆರವಾದ ಉತ್ತರಾಖಂಡ ವ್ಯಕ್ತಿ; ಕನ್ನಡಿಗರಿಂದ ವ್ಯಾಪಕ ಪ್ರಶಂಸೆ
- ಉತ್ತರಾಖಂಡದ ಮೂಲದ ಬೆಂಗಳೂರು ನಿವಾಸಿಯೊಬ್ಬರು ಪೌರ ಕಾರ್ಮಿಕರಿಗೆ ಸುರಕ್ಷತಾ ಸೂಚನೆಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಮೂಲಕ ಕನ್ನಡಿಗರಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.
Tue, 17 Sep 202407:17 AM IST
ಕರ್ನಾಟಕ News Live: ಯಕೃತ್ ದಾನ ಮಾಡಿ ಸಂಬಂಧಿ ಜೀವ ಉಳಿಸಲು ಹೋಗಿ ಪ್ರಾಣ ತೆತ್ತ ಉಪನ್ಯಾಸಕಿ: ಕುಂದಾಪುರ ತಾಲ್ಲೂಕಲ್ಲಿ ಮನಮಿಡಿಯುವ ಘಟನೆ
- ಸಂಬಂಧಿಯೊಬ್ಬರಿಗೆ ಯಕೃತ್ ಭಾಗ ದಾನ ಮಾಡಿದ್ದ ಕುಂದಾಪುರ ತಾಲ್ಲೂಕು ಕೋಟೇಶ್ವರದ ಉಪನ್ಯಾಸಕಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
Tue, 17 Sep 202406:42 AM IST
ಕರ್ನಾಟಕ News Live: ಕಲ್ಯಾಣ ಕರ್ನಾಟಕ ಉತ್ಸವ: ಕಲಬುರಗಿ, ರಾಯಚೂರು, ಬಳ್ಳಾರಿ, ಬೀದರ್, ಕೊಪ್ಪಳ ಸಹಿತ 7 ಜಿಲ್ಲೆಗಳಿಗೆ ಸಿಎಂ ಬಂಪರ್ ಯೋಜನೆಗಳ ಘೋಷಣೆ
- ಕಲ್ಯಾಣ ಕರ್ನಾಟಕ ದಿನ ದಶಮಾನೋತ್ಸವ ಅಂಗವಾಗಿ ಆಯೋಜಿಸಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಭಾರೀ ಕಾರ್ಯಕ್ರಮಗಳನ್ನು ಏಳು ಜಿಲ್ಲೆಗಳಿಗೆ ಘೋಷಿಸಿದ್ದಾರೆ. ಕಾರ್ಯಕ್ರಮಗಳ ವಿವರ ಇಲ್ಲಿದೆ.
Tue, 17 Sep 202404:35 AM IST
ಕರ್ನಾಟಕ News Live: ಮೈಸೂರು ಬೆಂಗಳೂರು ರೈಲುಗಳ ವೇಗ ಹೆಚ್ಚಿಸಿ ಸ್ವಾಮಿ; ಉಭಯ ನಗರಗಳ ನಡುವೆ ನಿತ್ಯ ಸಂಚರಿಸುವ ಪ್ರಯಾಣಿಕರ ಬೇಡಿಕೆ
- ಬೆಂಗಳೂರು ಹಾಗೂ ಮೈಸೂರು ನಗರಗಳ ನಡುವಿನ ರೈಲುಗಳ ಸಂಚಾರ ವೇಗ ಹೆಚ್ಚಿಸುವ ಬೇಡಿಕೆ ಪ್ರಯಾಣಿಕರಿಂದ ಕೇಳಿ ಬಂದಿದೆ. ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮೈಸೂರಿನಲ್ಲಿ ಮನವಿಯೂ ಸಲ್ಲಿಕೆಯಾಗಿದೆ.
Tue, 17 Sep 202403:10 AM IST
ಕರ್ನಾಟಕ News Live: Kalburgi News: ಕಲಬುರಗಿಯಲ್ಲಿ ಇಂದು ಕರ್ನಾಟಕ ಸಚಿವ ಸಂಪುಟ ಸಭೆ; ಕಲ್ಯಾಣ ಕರ್ನಾಟಕದ ಪ್ರಮುಖ 10 ನಿರೀಕ್ಷೆಗಳೇನು
- Kalaburgi News ಕಲಬುರಗಿ ನಗರದಲ್ಲಿ ಕರ್ನಾಟಕ ಸಚಿವ ಸಂಪುಟದ ಸಭೆ ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಭಾಗದ ಪ್ರಮುಖ ನಿರೀಕ್ಷೆಗಳ ಪಟ್ಟಿ ಇಲ್ಲಿದೆ.
Tue, 17 Sep 202402:57 AM IST
ಕರ್ನಾಟಕ News Live: ನಾವೇನೇ ಬರೆದರೂ , ಹೇಳಿದರೂ ಅದ್ಯಾವುದೂ ತಪ್ಪು ಸರಿಗಳ ಬೌಂಡರಿಯಲ್ಲಿ ನಿಲುಕಲು ಸಾಧ್ಯವಿಲ್ಲ! ಏಕೆ ಗೊತ್ತಾ; ರಂಗಸ್ವಾಮಿ ಮೂಕನಹಳ್ಳಿ ಬರಹ
- ರಂಗಸ್ವಾಮಿ ಮೂಕನಹಳ್ಳಿ: ಪ್ರಸ್ತುತ ಆರೋಗ್ಯ ಸಮಸ್ಯೆಗಳು ಎಲ್ಲರನ್ನೂ ಬಾಧಿಸುತ್ತಿವೆ. ವೈರಲ್ ಫೀವರ್, ಡೆಂಗ್ಯೂ.. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ ಕಾಡುತ್ತಿದೆ. ಸಮಾಜದಲ್ಲಿ ನೀವೇಷ್ಟೆ ದೊಡ್ಡವರಾಗಿ, ಹಣ, ಆಸ್ತಿ ಗಳಿಸಿ. ಆದರೆ ಆಸ್ಪತ್ರೆ ಎಂಬ ಸೌಧದಲ್ಲಿ ನೀವೊಬ್ಬ ರೋಗಿ ಅಷ್ಟೇ' ಎನ್ನುವ ಸರಳ ಸತ್ಯವನ್ನು ಮರೆಯದಿರಿ. ಆರೋಗ್ಯಕ್ಕಿಂತ ಮಿಗಿಲಾದ್ದದ್ದು ಏನಿಲ್ಲ.
Tue, 17 Sep 202402:43 AM IST
ಕರ್ನಾಟಕ News Live: ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡೋದು ತಪ್ಪಲ್ವಾ, ಕಾನೂನು ಮರೆತಿರುವ ಬೆಂಗಳೂರು ಪೊಲೀಸರು; ರಾಜೀವ ಹೆಗಡೆ ಬರಹ
- ಸಾರ್ವಜನಿಕ ಸ್ಥಳಗಳಲ್ಲಿ ನಿಂತು ಧೂಮಪಾನ ಮಾಡುವವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗುವಂತೆ ಧೂಮಪಾನ ಮಾಡುತ್ತಿರುವವರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರು, ಬೆಂಗಳೂರು ಪೊಲೀಸರು ಕಾನೂನು ಮರೆತವರಂತೆ ವರ್ತಿಸುತ್ತಿದ್ದಾರೆ, ಈ ಕುರಿತು ಪತ್ರಕರ್ತ ರಾಜೀವ ಹೆಗಡೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
Tue, 17 Sep 202401:50 AM IST
ಕರ್ನಾಟಕ News Live: ಸಿದ್ದರಾಮಯ್ಯ ಸವಾಲ್: ಮಿಸ್ಟರ್ ಕುಮಾರಸ್ವಾಮಿ, ಯಡಿಯೂರಪ್ಪ ಅವರೇ ನನ್ನನ್ನು ನೀವು ರಾಜಕೀಯವಾಗಿ ಮುಗಿಸ್ತೀರಾ
- CM Siddaramiah dares ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆಗಳು ನಡೆದಿರುವ ನಡುವೆಯೇ ಸಿಎಂ ಸಿದ್ದರಾಮಯ್ಯ ಪ್ರತಿಪಕ್ಷಗಳು ಮಾತ್ರವಲ್ಲದೇ ಅಡಳಿತ ಪಕ್ಷದವರಿಗೂ ಕಲಬುರಗಿ ಜಿಲ್ಲೆಯಲ್ಲಿ ಮಾತಿನ ಚಾಟಿ ಬೀಸಿದ್ದಾರೆ.
Tue, 17 Sep 202401:07 AM IST
ಕರ್ನಾಟಕ News Live: Karnataka Weather: ಬೀದರ್, ಕೊಡಗು, ಶಿರಾಲಿಯಲ್ಲಿ ಉಷ್ಣಾಂಶ ಕುಸಿದು ಚಳಿ; ಬೆಂಗಳೂರಲ್ಲಿ ಬಿಸಿಲು, ಮಳೆ ವಾತಾವರಣ ಹೇಗಿದೆ
- Karnataka Weather ಕರ್ನಾಟಕದಲ್ಲಿ ಮಳೆ ಕಡಿಮೆಯಾಗುತ್ತಿದ್ದರೆ ನಿಧಾನವಾಗಿ ಚಳಿ ಹೆಚ್ಚುತ್ತಿದೆ. ಬೀದರ್, ವಿಜಯಪುರ, ಧಾರವಾಡ, ಗದಗ ಭಾಗದಲ್ಲಿ ಬೆಳಗಿನ ವೇಳೆ ದಟ್ಟ ಚಳಿ ಅನುಭವವಾಗುತ್ತಿದೆ. ಕೊಡಗು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಯಲ್ಲೂ ಇದೇ ವಾತಾವರಣವಿದೆ.
Tue, 17 Sep 202412:30 AM IST
ಕರ್ನಾಟಕ News Live: Bescom Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಕರೆಂಟೇ ಇರೋದಿಲ್ಲ; ನಿಮ್ಮ ಏರಿಯಾನೂ ಇರಬಹುದು ನೋಡಿ
- Bescom Power Cut: ಬೆಂಗಳೂರು ನಗರದಲ್ಲಿ ತುರ್ತು ಕಾಮಗಾರಿ ಕೈಗೊಂಡ ಹಿನ್ನೆಲೆ ಹೆಬ್ಬಾಳ ಸ್ಟೇಷನ್ ವ್ಯಾಪ್ತಿಯ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.