Karnataka News Live October 15, 2024 : ತುಮಕೂರಿನಲ್ಲಿ ಸತತ ಮಳೆ, ಶಾಲಾ- ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳ ಪರದಾಟ; ಆಟೋಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live October 15, 2024 : ತುಮಕೂರಿನಲ್ಲಿ ಸತತ ಮಳೆ, ಶಾಲಾ- ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳ ಪರದಾಟ; ಆಟೋಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ತುಮಕೂರಿನಲ್ಲಿ ಸತತ ಮಳೆ, ಶಾಲಾ- ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳ ಪರದಾಟ; ಆಟೋಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್(Pexels)

Karnataka News Live October 15, 2024 : ತುಮಕೂರಿನಲ್ಲಿ ಸತತ ಮಳೆ, ಶಾಲಾ- ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳ ಪರದಾಟ; ಆಟೋಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

04:29 PM ISTOct 15, 2024 09:59 PM HT Kannada Desk
  • twitter
  • Share on Facebook
04:29 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Tue, 15 Oct 202404:29 PM IST

ಕರ್ನಾಟಕ News Live: ತುಮಕೂರಿನಲ್ಲಿ ಸತತ ಮಳೆ, ಶಾಲಾ- ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳ ಪರದಾಟ; ಆಟೋಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

  • Tumakuru Rains:  ತುಮಕೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಮಳೆ ಬಿಡುವು ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ, ವರುಣ ಮತ್ತಷ್ಟು ಆರ್ಭಟಿಸುತ್ತಿರುವುದು ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗಿದೆ.
Read the full story here

Tue, 15 Oct 202404:22 PM IST

ಕರ್ನಾಟಕ News Live: ಧೋ ಎಂದು ಸುರಿದ ಮಳೆಗೆ ಕಂಗಾಲಾದ ಬೆಂಗಳೂರು ನಿವಾಸಿಗಳು: ಸೋಷಿಯಲ್ ಮಿಡಿಯಾದಲ್ಲಿ ವಿಡಿಯೊ ಹಂಚಿಕೊಂಡು ಬಿಬಿಎಂಪಿ ವಿರುದ್ಧ ಆಕ್ರೋಶ

  • ವಾಯುಭಾರತದ ಕುಸಿತದ ಕಾರಣದಿಂದ ಮಹಾನಗರಿ ಬೆಂಗಳೂರಿನಲ್ಲಿ ಮಳೆ ಜೋರಾಗಿದೆ. ಕಳೆದ ರಾತ್ರಿಯಿಂದ ನಿರಂತರ ಮಳೆ ಸುರಿದಿದ್ದು ರಸ್ತೆಗಳೆಲ್ಲಾ ಜಲಾವೃತವಾಗಿದೆ. ಬಹುತೇಕ ಕಡೆ ನೀರು ನಿಂತು ಸಮುದ್ರದಂತಾಗಿದ್ದು ಬಿಬಿಎಂಪಿಯ ಅವ್ಯವಸ್ಥೆಯ ವಿರುದ್ಧ ಬೆಂಗಳೂರು ನಿವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read the full story here

Tue, 15 Oct 202402:30 PM IST

ಕರ್ನಾಟಕ News Live: MUDA Scam: ಯಾವುದೇ ಕ್ಷಣದಲ್ಲಿ ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ; ಯತೀಂದ್ರ ಸಿದ್ದರಾಮಯ್ಯ ಸುಳಿವು

  • Muda Land Case: ಮುಡಾ ಅಧ್ಯಕ್ಷ ಕೆ ಮರಿಗೌಡ ಅವರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಈ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ. ಅಲ್ಲದೆ, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರೂ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ.
Read the full story here

Tue, 15 Oct 202401:57 PM IST

ಕರ್ನಾಟಕ News Live: ಸಿಎಂ ಸಿದ್ದರಾಮಯ್ಯ ಓದಿದ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಲ್ಲೀಗ ಮೂಲಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

  •  Mysore News: ಸಿಎಂ ಸಿದ್ದರಾಮಯ್ಯ ಅವರು ಓದಿದ ಪ್ರತಿಷ್ಠಿತ ಯುವರಾಜ ಸರ್ಕಾರಿ ಕಾಲೇಜಿನಲ್ಲೀಗ ಮೂಲಸೌಕರ್ಯಗಳ ಕೊರತೆ ಎದುರಾಗಿದ್ದು, ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
Read the full story here

Tue, 15 Oct 202401:49 PM IST

ಕರ್ನಾಟಕ News Live: ಕಾಡಿನ ಕಥೆಗಳು: ಮೈಸೂರು ದಸರಾ ಜಂಬೂ ಸವಾರಿ ಗೆಲ್ಲಿಸಿದ ಮಾಗಿದ ಅಭಿಮನ್ಯು ಆತ್ಮವಿಶ್ವಾಸ, ಮಾವುತ ವಸಂತನ ಮಾಸದ ನಗು; ನಿಮಗೊಂದು ಸಲಾಂ

  • ಮೈಸೂರು ದಸರಾದ ಮುಖ್ಯ ಭಾಗ ಜಂಬೂ ಸವಾರಿ. ಅಲ್ಲಿ ಅಭಿಮನ್ಯು ಆನೆ, ತಾಯಿ ಚಾಮುಂಡೇಶ್ವರಿಯೇ ಕೇಂದ್ರ ಬಿಂದು. ಜಂಬೂ ಸವಾರಿ ನಿರಾತಂಕವಾಗಿರಲಿ ಎನ್ನುವ ಲಕ್ಷಾಂತರ ಮನಸುಗಳ ಭಾವನೆಯ ಬಿಂಬದಂತೆ ಕಂಡಿದ್ದು ಅಭಿಮನ್ಯು ಮಾವುತ ವಸಂತನ ನಗು ಹಾಗು ನಡೆ. ಈ ವಾರದ ಕಾಡಿನ ಕಥೆಯಲ್ಲಿ ದಸರಾ ಹೀರೋ ವಸಂತ.
Read the full story here

Tue, 15 Oct 202412:05 PM IST

ಕರ್ನಾಟಕ News Live: ಬಿಜೆಪಿ ಶಾಸಕ ಮುನಿರತ್ನಗೆ ಬಿಗ್‌ ರಿಲೀಫ್‌, ಜಾಮೀನು ಮಂಜೂರು ಮಾಡಿದ ಬೆಂಗಳೂರು ನ್ಯಾಯಾಲಯ

  • ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಅವರಿಗೆ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ನೀಡಿದೆ. 
  • ವರದಿ: ಎಚ್ . ಮಾರುತಿ, ಬೆಂಗಳೂರು
Read the full story here

Tue, 15 Oct 202411:58 AM IST

ಕರ್ನಾಟಕ News Live: School Holiday: ಧಾರಾಕಾರ ಮಳೆ ಮುನ್ಸೂಚನೆ; ಅಕ್ಟೋಬರ್ 16ರಂದು ಬೆಂಗಳೂರು ನಗರದ ಶಾಲೆಗಳಿಗೆ ರಜೆ ಘೋಷಣೆ

  • Bengaluru Rains: ಭಾರೀ ಮಳೆ ಹಿನ್ನೆಲೆಯಲ್ಲಿ ಬೆಂಗಳೂರಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ಕುರಿತು ಜಿಲ್ಲಾಧಿಕಾರಿ ಜಗದೀಶ್ ಅವರು ಮಾಹಿತಿ ನೀಡಿದ್ದಾರೆ.
Read the full story here

Tue, 15 Oct 202411:35 AM IST

ಕರ್ನಾಟಕ News Live: ಮಿಸ್‌ ಯು ಪಲ್ಲವಿ ಎಂದ i-pill: ಬೆಂಗಳೂರು ಮಹಿಳೆಗೆ ಅನುಚಿತ ಗರ್ಭನಿರೋಧಕ ಮಾತ್ರೆ ನೋಟಿಫಿಕೇಷನ್‌ ಕಳುಹಿಸಿ ಕ್ಷಮೆ ಕೇಳಿದ ಜೆಪ್ಟೊ

  • ಬೆಂಗಳೂರಿನ ಮಹಿಳಾ ಗ್ರಾಹಕರೊಬ್ಬರಿಗೆ ಝೆಪ್ಟೊ ಆನ್‌ಲೈನ್‌ ಗ್ರೋಸರಿ ಡೆಲಿವರಿ ತಾಣವು ಅನುಚಿತ ನೋಟಿಫಿಕೇಷನ್‌ ಕಳುಹಿಸಿದೆ. ಈ ಕುರಿತು ಪ್ರಶ್ನಿಸಿದ ಮಹಿಳೆ ಬಳಿ ಝೆಪ್ಟೊ ಕ್ಷಮಾಪಣೆ ಕೇಳಿದ್ದು, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದೆ.
Read the full story here

Tue, 15 Oct 202411:14 AM IST

ಕರ್ನಾಟಕ News Live: ಅಬ್ಬಾ.. ಮಳೆಗೆ ಮಾನ್ಯತಾ ಟೆಕ್‌ ಪಾರ್ಕ್‌ ಕೂಡ ಜಲಾವೃತ, ಲೇಕ್, ವಾಟರ್‌ಫಾಲ್ಸ್ ಎಲ್ಲ ಇಲ್ಲೇ ನೋಡಬಹುದು ಅಂತಿದ್ದಾರೆ ಉದ್ಯೋಗಿಗಳು- ವಿಡಿಯೋ

  • ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಕಾರಣ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ, ಮಳೆಗೆ ಮಾನ್ಯತಾ ಟೆಕ್‌ ಪಾರ್ಕ್‌ ಕೂಡ ಜಲಾವೃತ, ಲೇಕ್, ವಾಟರ್‌ಫಾಲ್ಸ್ ಎಲ್ಲ ಇಲ್ಲೇ ನೋಡಬಹುದು ಎಂದು ಉದ್ಯೋಗಿಗಳು ಹೇಳತೊಡಗಿದ್ದು, ವಿಡಿಯೋಗಳು ವೈರಲ್ ಆಗಿವೆ.

Read the full story here

Tue, 15 Oct 202411:11 AM IST

ಕರ್ನಾಟಕ News Live: ಸೋಲಾರ್ ತಂತಿ, ಆನೆ ಕಂದಕ, ರೈಲ್ವೆ ಹಳಿ ಬೇಲಿ ಅಳವಡಿಕೆ ಎಫೆಕ್ಟ್; ಮೃತಪಟ್ಟ ಆದಿವಾಸಿಯ ಅಂತ್ಯಸಂಸ್ಕಾರಕ್ಕೆ ಪರದಾಟ

  • Mysore News: ಮೈಸೂರು ಜಿಲ್ಲೆ ಹೆಚ್​ಡಿ‌ ಕೋಟೆ ತಾಲೂಕಿನ ಹಿರೇಹಳ್ಳಿ ಆದಿವಾಸಿಗಳ ಪೈಕಿ ಒಬ್ಬರು ಮೃತಪಟ್ಟಾಗ ಆನೆ ಕಂದಕ, ಸೋಲಾರ್ ತಂತಿ ಬೇಲಿ, ರೈಲ್ವೆ ಹಳಿ ಬೇಲಿಯಿಂದಾಗಿ ಅಂತ್ಯಸಂಸ್ಕಾರಕ್ಕೆ ಇನ್ನಿಲ್ಲದ ಕಸರತ್ತು ನಡೆಸಲಾಗಿದೆ.
Read the full story here

Tue, 15 Oct 202411:01 AM IST

ಕರ್ನಾಟಕ News Live: Karnataka Elections: ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ,ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್‌ 13ಕ್ಕೆ ಉಪ ಚುನಾವಣೆ ಘೋಷಣೆ

  • ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವ್‌, ಸಂಡೂರು ವಿಧಾನಸಭೆ ಚುನಾವಣೆಗೆ ಮತದಾನ ನವೆಂಬರ್‌ 13ರಂದು ನಡೆಯಲಿದ್ದು. ನವೆಂಬರ್‌ 23ರಂದು ಮತ ಎಣಿಕೆ ನಡೆಯಲಿದೆ. 
Read the full story here

Tue, 15 Oct 202409:54 AM IST

ಕರ್ನಾಟಕ News Live: ಮೈಸೂರು ಲೋಕಾಯುಕ್ತ ಅಧಿಕಾರಿಗಳ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ ಆರ್​ಟಿಐ ಕಾರ್ಯಕರ್ತ; ಕಾರಣ ಹೀಗಿದೆ

  • Mysore News: ಮುಡಾ ಹಗರಣಕ್ಕೆ ಸಂಬಂಧಿಸಿ 1 ಸಾವಿರ ದಾಖಲೆ ಸಂಗ್ರಹಿಸಿದ್ದರೂ ದಾಳಿ ನಡೆಸದೆ ಸರ್ಕಾರದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಆರ್​ಟಿಐ ಕಾರ್ಯಕರ್ತ ಗಂಗರಾಜು ಎನ್ನುವವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
Read the full story here

Tue, 15 Oct 202409:10 AM IST

ಕರ್ನಾಟಕ News Live: ಬೆಂಗಳೂರಲ್ಲಿ ಧಾರಾಕಾರ ಮಳೆಗೆ ಜಲಾವೃತವಾಗಿವೆ ರಸ್ತೆಗಳು; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ, ವೈರಲ್ ವಿಡಿಯೋಗಳು ಇಲ್ಲಿವೆ

  • ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯಿಂದಲೆ ಮಳೆ ಸುರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿದೆ. ಧಾರಾಕಾರ ಮಳೆಯ ಕಾರಣ ವಿವಿಧೆಡೆ ವಾಹನ ಸಂಚಾರ ಮತ್ತು ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಕಡೆಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Read the full story here

Tue, 15 Oct 202408:58 AM IST

ಕರ್ನಾಟಕ News Live: Talacauvery Theerthodbhava 2024: ಕೊಡಗಲ್ಲಿ ದಸರಾ ಮುಗಿಯಿತು, ಗುರುವಾರ ಬೆಳಿಗ್ಗೆ ತಲಕಾವೇರಿ ತೀರ್ಥೋದ್ಭವದ ಸಡಗರ, ಸಿದ್ದತೆ ಚುರುಕು

  • ಕೊಡಗಿನ ಪ್ರಮುಖ ಹಬ್ಬವಾದ ಕಾವೇರಿ ತೀರ್ಥೋದ್ಭವಕ್ಕೆ ಅಂತಿಮ ಕ್ಷಣದ ಸಿದ್ದತೆಗಳು ನಡೆದಿವೆ. ಈ ಬಾರಿ ಗುರುವಾರ ಬೆಳಿಗ್ಗೆ ತೀರ್ಥೋದ್ಭವಕ್ಕೆ ಕಾವೇರಿ ಮೂಲ ತಾಣ ಅಣಿಯಾಗಿದೆ.
Read the full story here

Tue, 15 Oct 202408:10 AM IST

ಕರ್ನಾಟಕ News Live: KPTCL Recruitment 2024: ಕೆಪಿಟಿಸಿಎಲ್‌ನಲ್ಲಿ 2975 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ವೇತನ ಎಷ್ಟು, ಕೊನೆ ದಿನ ನವೆಂಬರ್‌ 20

  • kptcl recruitment 2024: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮವು ಕಿರಿಯ ಸ್ಟೇಶನ್ ಅಟೆಂಡಂಟ್, ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಅಕ್ಟೋಬರ್‌ 21ರಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಒಂದು ತಿಂಗಳು ಕಾಲಾವಕಾಶ ಇರಲಿದೆ. 
Read the full story here

Tue, 15 Oct 202407:40 AM IST

ಕರ್ನಾಟಕ News Live: ಅರ್ಕಾವತಿ ಪ್ರಕರಣ: ಸಿಎಂ ಸಿದ್ದರಾಮಯ್ಯ, ಬಿಡಿಎ ಆಯುಕ್ತ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ದೂರು

  • Arkavathy layout controversy: ಮುಡಾ ಹಗರಣದ ಬೆನ್ನಲ್ಲೇ ಬೆಂಗಳೂರು ಅರ್ಕಾವತಿ ಬಡಾವಣೆ ವಿಚಾರವೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಂಕಷ್ಟ ತರುವ ಸಾಧ್ಯತೆ ಇದೆ.ಬೆಂಗಳೂರಿನ ಅರ್ಕಾವತಿ ಲೇಔಟ್‌ನ ನಿವೇಶನದಾರರು ಸಿಎಂ ಸಿದ್ದರಾಮಯ್ಯ, ಬಿಡಿಎ ಆಯುಕ್ತ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
Read the full story here

Tue, 15 Oct 202407:39 AM IST

ಕರ್ನಾಟಕ News Live: ಅಯ್ಯೋ ನನ್ನ ಮಾಲೆ.. ಕಳ್ಳ ಎಳ್ಕೊಂಡು ಹೋದ: ಬೆಂಗಳೂರಲ್ಲಿ ದೇವಿ ಸ್ತೋತ್ರ ಪಠಿಸುತ್ತಿದ್ದ ಮಹಿಳೆಯ ಸರ ಎಗರಿಸಿ ಕಳ್ಳ; ವಿಡಿಯೋ ವೈರಲ್‌

  • ಬೆಂಗಳೂರಲ್ಲಿ ಸರಗಳ್ಳತನ ಹೊಸದಲ್ಲ. ಆದರೆ ಇತ್ತೀಚಿನ ವೈರಲ್ ವಿಡಿಯೋ ಎಂಥವರಲ್ಲೂ ನಡುಕ ಹುಟ್ಟಿಸುವಂಥದ್ದು. ದೇವಸ್ಥಾನದಲ್ಲಿ ದೇವಿಸ್ತೋತ್ರ ಪಠಿಸುತ್ತಿದ್ದ ಮಹಿಳೆಯ ಸರ ಎಗರಿಸಿದ ಕಳ್ಳ ಆತಂಕ ಮೂಡಿಸಿದ್ದಾನೆ. ವಿಡಿಯೋ ವೈರಲ್‌ ಆಗಿದ್ದು, ಅದರ ವಿವರ ಇಲ್ಲಿದೆ.

Read the full story here

Tue, 15 Oct 202406:15 AM IST

ಕರ್ನಾಟಕ News Live: Bangalore Power Cut: ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶದಲ್ಲೂ ಇಂದು ವಿದ್ಯುತ್‌ ಕಡಿತ, ಯಾವ್ಯಾವ ಭಾಗದಲ್ಲಿ ಆಗಲಿದೆ ವ್ಯತ್ಯಯ

  • ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಂಗಳವಾರ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಆ ಪ್ರದೇಶಗಳ ವಿವರ ಇಲ್ಲಿದೆ.
Read the full story here

Tue, 15 Oct 202406:15 AM IST

ಕರ್ನಾಟಕ News Live: ಬೆಂಗಳೂರು ಜಾಲಹಳ್ಳಿಯಲ್ಲಿ ಬಾಲಕಿಯನ್ನು ಕಚ್ಚಿ ಎಳೆದಾಡಿದ ಬೀದಿನಾಯಿ; ಕೋಲು ಹಿಡ್ಕೊಂಡು ಓಡಾಡಿ ಎಂದು ಪುಕ್ಕಟೆ ಸಲಹೆ ನೀಡ್ತಿದೆ ಬಿಬಿಎಂಪಿ

  • ಬೆಂಗಳೂರು ಜಾಲಹಳ್ಳಿಯಲ್ಲಿ ಮತ್ತೆ ಬೀದಿ ನಾಯಿ ಕಾಟ ಹೆಚ್ಚಾಗಿದೆ. ಬಾಲಕಿಯನ್ನು ಕಚ್ಚಿ ಎಳೆದಾಡಿ ಬೀದಿನಾಯಿಗಳನ್ನು ಸ್ಥಳೀಯರು ಓಡಿಸಿ ಆಕೆಯನ್ನು ರಕ್ಷಿಸಿದ ವಿಡಿಯೋ ವೈರಲ್ ಆಗಿದೆ. ಈಗ ನಾಯಿಗಳ ಹಬ್ಬ ಆಚರಿಸಲು ಬಿಬಿಎಂಪಿ ಮುಂದಾಗಿರುವ ಕಾರಣ ಮತ್ತು ಕೋಲು ಹಿಡ್ಕೊಂಡು ಓಡಾಡಿ ಎಂದು ಪುಕ್ಕಟೆ ಸಲಹೆ ನೀಡ್ತಾ ಇರುವ ಕಾರಣ ಬೀದಿ ನಾಯಿಗಳ ಕಾಟ ಮತ್ತೆ ಮುನ್ನೆಲೆಗೆ ಬಂದಿದೆ.

Read the full story here

Tue, 15 Oct 202405:57 AM IST

ಕರ್ನಾಟಕ News Live: ಬೆಂಗಳೂರಿನಲ್ಲಿ ನಾಯಿ ಕಾಟ, 6 ತಿಂಗಳಲ್ಲಿ 14 ಸಾವಿರ ಜನರಿಗೆ ಕಚ್ಚಿದ ಶ್ವಾನಗಳು; ನಿಯಂತ್ರಣಕ್ಕೆ ಬಿಬಿಎಂಪಿ ಯೋಜನೆ

  • ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳಲ್ಲಿ ಅಂದರೆ ಏಪ್ರಿಲ್‌ ಮತ್ತು ಸೆಪ್ಟೆಂಬರ್‌ ನಡುವೆ 13,748 ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ಇತ್ತೀಚೆಗೆ ಜಾಲಹಳ್ಳಿ ವ್ಯಾಪ್ತಿಯಲ್ಲಿ ನಾಯಿ ಕಡಿದಿದ್ದರಿಂದ ನಿವೃತ್ತ ಶಿಕ್ಷಕಿಯೊಬ್ಬರು ಅಸು ನೀಗಿದ್ದರು. ಈ ಪ್ರಕರಣದ ನಂತರ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. (ವರದಿ: ಎಚ್. ಮಾರುತಿ, ಬೆಂಗಳೂರು)

Read the full story here

Tue, 15 Oct 202404:49 AM IST

ಕರ್ನಾಟಕ News Live: ಬೆಂಗಳೂರು: ಜಯನಗರದಲ್ಲಿ 44 ವರ್ಷದ ಕಾಲೇಜು ಉಪನ್ಯಾಸಕಿ ಆತ್ಮಹತ್ಯೆಗೆ ಯತ್ನ; ಶಿಸ್ತುಕ್ರಮದ ಆತಂಕದಲ್ಲಿ ಕೃತ್ಯ

  • ಬೆಂಗಳೂರು ಜಯನಗರದ ಖಾಸಗಿ ಕಾಲೇಜಿನ 44 ವರ್ಷದ ಉಪನ್ಯಾಸಕಿಯೊಬ್ಬರು ಕಾಲೇಜಿನಲ್ಲಿಯೇ ಆತ್ಮಹತ್ಯೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಅವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಶಿಸ್ತುಕ್ರಮದ ಆತಂಕದ ಕೃತ್ಯ ಎಂದು ಶಂಕಿಸಲಾಗಿದೆ. (ವರದಿ- ಎಚ್ ಮಾರುತಿ, ಬೆಂಗಳೂರು)

Read the full story here

Tue, 15 Oct 202404:43 AM IST

ಕರ್ನಾಟಕ News Live: Karnataka Rains: ದಸರಾ ವೇಳೆ ಬೆಂಗಳೂರು, ಧಾರವಾಡ, ತುಮಕೂರು,ಬೆಳಗಾವಿ ಸಹಿತ 14 ಜಿಲ್ಲೆಗಳಲ್ಲಿ ಉತ್ತಮ ಮಳೆ;ಯಾವ ಜಿಲ್ಲೆಯಲ್ಲಿ ಕೊರತೆ

  • ಈ ಬಾರಿಯ ದಸರಾ ವೇಳೆ ಆರು ಜಿಲ್ಲೆಗಳಲ್ಲಿ ಹೊರತುಪಡಿಸಿದರೆ ಕರ್ನಾಟಕದ 25 ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ. 
Read the full story here

Tue, 15 Oct 202404:03 AM IST

ಕರ್ನಾಟಕ News Live: ಇಂದಿರಾನಗರದಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಇನ್ನು ಒಂದೂವರೆ ಗಂಟೆ ಬೇಡ, ಕೇವಲ 5 ನಿಮಿಷ ಸಾಕು: ಹೇಗಂತೀರಾ..

  • ಬೆಂಗಳೂರು ನಗರ ಸಂಚಾರದಲ್ಲಿ ಶೀಘ್ರವೇ ಕ್ರಾಂತಿಕಾರಿ ಬದಲಾವಣೆಯಾಗುವ ಸೂಚನೆ ಇದೆ. “ಇಂದಿರಾನಗರದಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಇನ್ನು ಒಂದೂವರೆ ಗಂಟೆ ಬೇಡ, ಕೇವಲ 5 ನಿಮಿಷ ಸಾಕು” ಎಂದು ಸರಳಾ ಏವಿಯೇಷನ್ ಸಿಇಒ ಆಂಡ್ರಿಯನ್ ಶಿಮಟ್ ಹೇಳಿರುವುದು ಗಮನಸೆಳೆದಿದೆ. ಕ್ರಾಂತಿಕಾರಿ ಬದಲಾವಣೆ ಯಾವ ರೀತಿ ಎಂಬುದರ ವಿವರ ಇಲ್ಲಿದೆ.

Read the full story here

Tue, 15 Oct 202403:48 AM IST

ಕರ್ನಾಟಕ News Live: Mysore Dasara 2024: ಮೈಸೂರು ದಸರಾ ಮೆರವಣಿಗೆ; ಮಂಡ್ಯ ಜಿಲ್ಲೆ ರಂಗನತಿಟ್ಟು, ವಾರ್ತಾ ಇಲಾಖೆ ಬೆಳಗಾವಿ ಗಾಂಧಿ ಅಧಿವೇಶನ ಸ್ತಬ್ಧಚಿತ್ರ ಪ್ರಥಮ

  • ಮೈಸೂರು ದಸರಾ ಜಂಬೂ ಸವಾರಿಯ ವಿಶೇಷ ಆಕರ್ಷಣೆಗಳಲ್ಲಿ ಒಂದಾದ ಸ್ತಬ್ಧಚಿತ್ರಗಳಲ್ಲಿ ಮಂಡ್ಯ ಜಿಲ್ಲೆಯ ರಂಗನತಿಟ್ಟು ಪರಿಕಲ್ಪನೆ, ವಾರ್ತಾ ಇಲಾಖೆಯ ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಹಾಗೂ ಬಸವಣ್ಣನವರ ಸಂದೇಶದ ಸಾರುವ ಪ್ರಯತ್ನಕ್ಕೆ ಪ್ರಥಮ ಸ್ಥಾನ ಲಭಿಸಿದೆ.
Read the full story here

Tue, 15 Oct 202402:20 AM IST

ಕರ್ನಾಟಕ News Live: ಬೆಂಗಳೂರಲ್ಲಿ ಕಲಬುರಗಿ ಮೂಲದ ಒಂದೇ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಸೇರಿ ನಾಲ್ವರ ಮೃತದೇಹಗಳು ಪತ್ತೆ; ಕೊಲೆ-ಆತ್ಮಹತ್ಯೆ ಶಂಕೆ

  • ಕಲಬುರಗಿ ಮೂಲದ ಒಂದೇ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಸೇರಿ ನಾಲ್ವರ ಮೃತದೇಹ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಕೊಲೆ- ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ರಾಜಾನುಕುಂಟೆ ಪೊಲೀಸರು ತನಿಖೆ ನಡೆಸಿದ್ದಾರೆ. 

Read the full story here

Tue, 15 Oct 202401:14 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ; ರಾಜ್ಯದ ಉದ್ದಗಲಕ್ಕೂ ಇಂದು ಮಳೆ, ಕರಾವಳಿ, ಬೆಂಗಳೂರು ಸೇರಿ ದಕ್ಷಿಣ ಒಳನಾಡಲ್ಲಿ ತುಸು ಹೆಚ್ಚು ವರ್ಷಧಾರೆ

  • ಹಿಂಗಾರು ಮಳೆ ಶುರುವಾಗಿದ್ದು, ವಾಯುಭಾರ ಕುಸಿತದ ಕಾರಣ ಕರ್ನಾಟಕದ ಉದ್ದಗಲಕ್ಕೂ ಇಂದು (ಅಕ್ಟೋಬರ್ 15) ಮಳೆಯಾಗಲಿದೆ. ಬೆಂಗಳೂರು ಹವಾಮಾನ ಇಂದು ಮುದ ನೀಡುವಂತೆ ಇರಲಿದ್ದು, ಬೆಂಗಳೂರು ನಗರ, ಗ್ರಾಮಾಂತರ ಸೇರಿ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ತುಸು ಹೆಚ್ಚು ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಅದರ ವಿವರ ಇಲ್ಲಿದೆ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter