Entertainment News in Kannada Live September 25, 2024: Saripodhaa Sanivaaram OTT: ಸರಿಪೋಧಾ ಶನಿವಾರಂ ಒಟಿಟಿಗೆ; ನಾನಿ ನಟನೆಯ ಬ್ಲಾಕ್‌ಬಸ್ಟರ್ ಸಾಹಸ ಸಿನಿಮಾವನ್ನು ಮನೆಯಲ್ಲೇ ನೋಡಿ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 25 Sep 202412:45 PM IST
- Saripodhaa Sanivaaram OTT: ತೆಲುಗು ನಟ ನಾನಿ ನಟನೆಯ ಸರಿಪೋಧಾ ಶನಿವಾರಂ ಸಿನಿಮಾವು ಸೆಪ್ಟೆಂಬರ್ 26ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಕೆ ಮಾಡಿರುವ ಈ ಚಿತ್ರದಲ್ಲಿ ನಾನಿಯು ಶನಿವಾರದಂದು ಭ್ರಷ್ಟರ ವಿರುದ್ಧ ಹೋರಾಡುತ್ತಾನೆ.
Wed, 25 Sep 202411:31 AM IST
- CTRL Movie Trailer: ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟನೆಯ ಕಂಟ್ರೋಲ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಸೈಬರ್ ಮತ್ತು ಎಐ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಮೂಡಿಬಂದ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ನೆಟ್‌ಫ್ಲಿಕ್ಸ್ ಒಟಿಟಿ ಅಂಗಳಕ್ಕೆ ಬರಲಿದೆ.
Wed, 25 Sep 202411:21 AM IST
ಕನ್ನಡದಲ್ಲಿ ಎಷ್ಟೋ ಪ್ರತಿಭೆಗಳು ಎಲೆ ಮರೆ ಕಾಯಿಯಂತೆ ಇದ್ದಾರೆ. ಕೆಟಿಎಂ, ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ ಹಿಂದಿಯ 'ಮಾನ್ಸೂನ್ ಶೂಟೌಟ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಯುವ ಪ್ರತಿಭೆ ಚೇತನ್ ರಾವ್, ಬೆಂಗಳೂರಿನವರು. ಇಂಜಿನಿಯರಿಂಗ್ ಪದವೀಧರರಾಗಿರುವ ಇವರು ನಂತರ ಸಂಗೀತ ಕ್ಷೇತ್ರವನ್ನು ಅಯ್ಕೆ ಮಾಡಿಕೊಂಡರು.
Wed, 25 Sep 202411:20 AM IST
- OTT Malayalam Comedy Movie: ಮಲಯಾಳಂ ಕಾಮಿಡಿ ಸಿನಿಮಾಗಳು ತಮ್ಮ ನೈಜತೆಯಿಂದ ಗಮನ ಸೆಳೆಯುತ್ತವೆ. ಮಲಯಾಳಂನ ಕಾಮಿಡಿ ಸಿನಿಮಾವೊಂದು ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದು ತಿಂಗಳೊಳಗೆ ಒಟಿಟಿಯತ್ತ ಮುಖ ಮಾಡುತ್ತಿದೆ. ಇನ್ನೆರಡು ದಿನಗಳಲ್ಲಿ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಬಹುದು.
Wed, 25 Sep 202410:32 AM IST
- Devara Part 1: ಜೂನಿಯರ್ ಎನ್‌ಟಿಆರ್ ಕೇವಲ ತೆಲುಗು ನಾಡಿಗೆ ಮಾತ್ರ ಸೀಮಿತವಾದ ನಟನಲ್ಲ. ಅವರನ್ನು ನೋಡುವ, ತೆರೆಮೇಲೆ ಆರಾಧಿಸುವ ದೊಡ್ಡ ಬಳಗ ಕರ್ನಾಟಕದಲ್ಲಿಯೂ ಇದೆ. ಇದೀಗ ದೇವರ ಸಿನಿಮಾದ ಉತ್ಸವ ಬೆಂಗಳೂರಿನಲ್ಲಿಯೂ ಶುರುವಾಗಿದೆ. ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿಯೂ ದೇವರ ಕರುನಾಡಿನಲ್ಲಿ ಮುನ್ನಡೆ ಇರಿಸಿದ್ದಾನೆ.
Wed, 25 Sep 202409:25 AM IST
ಬಹು ನಿರೀಕ್ಷಿತ ದೇವರ ಸಿನಿಮಾ 1985ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಕರಮಚೇಡು ಹತ್ಯಾಕಾಂಡದ ಕಥೆಯನ್ನು ಹೊಂದಿದೆ ಎನ್ನಲಾಗುತ್ತಿದೆ. ಸಿನಿಮಾ ನೋಡಿದವರಾಗಲೀ, ಚಿತ್ರತಂಡವಾಗಲೀ ಇದುವರೆಗೂ ಚಿತ್ರಕಥೆಯ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ. ಚಿತ್ರ ಸೆಪ್ಟೆಂಬರ್ 27 ರಂದು ತೆರೆ ಕಾಣುತ್ತಿದೆ.
Wed, 25 Sep 202409:18 AM IST
- Director Koratala Siva About Devara Movie: ಆಕ್ಷನ್ ಥ್ರಿಲ್ಲರ್ ಚಲನಚಿತ್ರ ‘ದೇವರ’ ನಿರ್ದೇಶಕ ಕೊರಟಾಲ ಶಿವ, ಚಿತ್ರದ ಕುರಿತು ಮಾತನಾಡಿದ್ದಾರೆ. ಸದ್ಯ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಡೈರೆಕ್ಟರ್, ಅತಿಯಾದ ಧೈರ್ಯ ಒಳ್ಳೆಯದಲ್ಲ. ಮನುಷ್ಯನಿಗೆ ಭಯ ಇರಬೇಕು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಚಿತ್ರ ಕುರಿತು ಅವರ ಮಾತುಗಳು ಹೀಗಿವೆ.
Wed, 25 Sep 202408:29 AM IST
- Devara Climax: ಇದೇ ಸೆಪ್ಟೆಂಬರ್ 27ರಂದು ಬಿಡುಗಡೆಗೊಳ್ಳುವ ದೇವರ ಸಿನಿಮಾಕ್ಕೆ ಸಂಬಂಧಪಟ್ಟಂತೆ, ವಿಶೇಷವಾಗಿ ಕ್ಲೈಮ್ಯಾಕ್ಸ್ ಬಗ್ಗೆ ಸಿನಿಮಾಟೋಗ್ರಾಫರ್ ರತ್ನವೇಲು ಸಾಕಷ್ಟು ಸುಳಿವು ನೀಡಿದ್ದಾರೆ. ಈ ಚಿತ್ರದಲ್ಲಿ ಜಾಹ್ನವಿ ಕಪೂರ್ ಪಾತ್ರ ಯಾವಾಗ ಕಾಣಿಸಿಕೊಳ್ಳುತ್ತದೆ ಎಂಬ ವಿವರವನ್ನೂ ಅವರು ನೀಡಿದ್ದಾರೆ.
Wed, 25 Sep 202408:03 AM IST
ಜ್ಯೂ. ಎನ್‌ಟಿಆರ್ ಹಾಗೂ ಜಾಹ್ನವಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ದೇವರ ಸಿನಿಮಾ ರಿಲೀಸ್‌ಗೆ ಇನ್ನು 2 ದಿನಗಳಷ್ಟೇ ಬಾಕಿ ಇದೆ. ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಜ್ಯೂ ಎನ್‌ಟಿಆರ್ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ನಡುವೆ ಚಿತ್ರದ ಮೊದಲ ವಿಮರ್ಶೆ ಹೊರಬಿದ್ದಿದೆ. ವಿದೇಶದಲ್ಲಿ ಸಿನಿಮಾ ನೋಡಿದ ವಿತರಕರು ವಿಮರ್ಶೆ ನೀಡಿದ್ದಾರೆ.
Wed, 25 Sep 202407:41 AM IST
- Devara Part 1 advance Booking: ಜೂನಿಯರ್ ಎನ್‌ಟಿಆರ್ ನಟನೆಯ ಬಹುನಿರೀಕ್ಷಿತ ದೇವರ ಪಾರ್ಟ್ 1 ಸಿನಿಮಾ, ಇನ್ನೇನು ಸೆ. 27ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲ ಮುಂಗಡ ಟಿಕೆಟ್ ಬುಕಿಂಗ್ ವಿಚಾರದಲ್ಲಿಯೂ ಕೋಟಿ ಕೋಟಿ ಬಾಚಿಕೊಂಡಿದೆ ಈ ಸಿನಿಮಾ.
Wed, 25 Sep 202407:18 AM IST
8 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ. ರಂಗೀಲಾ ನಟಿ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿರುವ ವಿಚಾರ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. 2018 ರಲ್ಲಿ ಊರ್ಮಿಳಾ , ಮೋಸಿನ್ ಅಖ್ತರ್ ಮಿರ್ ಕೈ ಹಿಡಿದಿದ್ದರು.
Wed, 25 Sep 202406:33 AM IST
- Malavika Avinash: ಸ್ಟಾರ್ ಕಿಡ್ಸ್ ಸಂಪ್ರದಾಯದ ಬಗ್ಗೆ ನಟಿ ಮಾಳವಿಕಾ ಅವಿನಾಶ್ ಸುದೀರ್ಘ ಬರಹದ ಪೋಸ್ಟ್ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್ ಕಾರ್ಯಕ್ರಮಕ್ಕೆ ಮಗಳನ್ನು ಕರೆತಂದಿದ್ದ ಐಶ್ವರ್ಯಾ ನಡೆದೆ ಮಾಳವಿಕಾ ಬೇಸರ ವ್ಯಕ್ತಪಡಿಸಿದ್ದಾರೆ.
Wed, 25 Sep 202406:23 AM IST
ಬಿಗ್ ಬಾಸ್ ಕಾರ್ಯಕ್ರಮಕ್ಕಾಗಿ ಕಲರ್ಸ್ ಕನ್ನಡದಲ್ಲಿ 2 ಸೀರಿಯಲ್‌ಗಳೂ ಮುಕ್ತಾಯವಾಗುತ್ತಿದೆ. ಅದರಲ್ಲಿ ಅಂತರಪಟ ಧಾರಾವಾಹಿ ತಂಡ ಅಧಿಕೃತವಾಗಿ ವಿದಾಯ ಹೇಳಿದೆ. ಕಲಾವಿದರು ಒಟ್ಟಿಗೆ ಪಾರ್ಟಿ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದೆ.
Wed, 25 Sep 202405:07 AM IST
- Zee Kannada Serial: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ. ಅವಳಿಗೆ ಸಹಾಯ ಮಾಡಲು ಯಾರೂ ಬರದ ಸಂದರ್ಭದಲ್ಲಿ ಇದೀಗ ಶಿವು ಅವಳನ್ನು ಕಾಪಾಡಲು ತನ್ನ ಪ್ರಾಣವನ್ನೇ ಒತ್ತೆ ಇಡಲು ರೆಡಿಯಾಗಿದ್ದಾನೆ. ಮುಂದೇನಾಗುತ್ತದೆ ನೋಡಿ.
Wed, 25 Sep 202404:12 AM IST
- Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಮಹತ್ವದ ಬೆಳವಣಿಗೆ ಏನೂ ನಡೆದಿಲ್ಲ. ಆದರೆ, ಆಸ್ಪತ್ರೆಯ ಸಿಸ್ಟರ್‌ಗೆ ಆಮಿಷವೊಡ್ಡಿದ ಜೈದೇವ್ ಮಲ್ಲಿಗೆ ಪ್ರಜ್ಞೆ ಬಾರದಂತೆ ನೋಡಿಕೊಳ್ಳಲು ಯಶಸ್ವಿಯಾಗಿದ್ದಾನೆ. ದಿಯಾ ಜೈದೇವ್ ಸಂಬಂಧ ಭೂಮಿಕಾ ಮತ್ತು ಗೌತಮ್‌ಗೆ ತಿಳಿಯುವುದೇ? ಎಂಬ ಸಂದೇಹ ಇದೆ.
Wed, 25 Sep 202404:00 AM IST
- Case against YouTuber Harsha Sai: ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಹೈದರಾಬಾದ್‌ನಲ್ಲಿ ಕೇಸ್ ದಾಖಲಾಗಿದೆ. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ಅತ್ಯಾಚಾರ ಎಸಗಿ ನಗ್ನ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಹರ್ಷ ವಿರುದ್ಧ ಪ್ರಕರಣ ದಾಖಲಾಗಿದೆ.
Wed, 25 Sep 202403:16 AM IST
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆ.24ರ ಎಪಿಸೋಡ್‌ನಲ್ಲಿ ತಾಂಡವ್ ಅಮ್ಮನ ಮುಂದೆ ಮತ್ತೆ ಭಾಗ್ಯಾಗೆ ಅವಮಾನ ಮಾಡುತ್ತಾನೆ. ಎಣ್ಣೆ ಮುಖದ ಭಾಗ್ಯಾಗೆ ಫ್ಯಾಷನ್ ಸೆನ್ಸ್, ಲೋಕಜ್ಞಾನ ಎರಡೂ ಇಲ್ಲ ಎಂದು ಹೀಯಾಳಿಸುತ್ತಾನೆ. ಅವಳನ್ನು ನಿನ್ನಿಷ್ಟದಂತೆ ಬದಲಿಸುತ್ತೇನೆ ಎಂದು ಕುಸುಮಾ ಚಾಲೆಂಜ್ ಮಾಡುತ್ತಾಳೆ.
Wed, 25 Sep 202403:15 AM IST
- ಪ್ರಾಣ ಉಳಿಸಿದ ಸುಬ್ಬು ಮೇಲೆ ಶ್ರಾವಣಿಗೆ ಪ್ರೀತಿ ಹೆಚ್ಚಾಗ್ತಿದ್ರೆ, ಸುಬ್ಬುಗೇಕೊ ಪಾಪ ಅನ್ನಿಸುತ್ತಿದ್ದಾಳೆ ಶ್ರೀವಲ್ಲಿ. ಯಜಮಾನರನ್ನು ನೋಡಲಾಗದೇ ಅಳುತ್ತಿರುವ ಸಾವಿತ್ರಿ ಒಂದೆಡೆಯಾದ್ರೆ, ವೀರೇಂದ್ರನನ್ನ ಕೊಲ್ಲಲ್ಲೇಬೇಕು ಎನ್ನುವ ಪ್ರಯತ್ನದಲ್ಲಿ ವಿಜಯಾಂಬಿಕಾ. ಸೆಪ್ಟೆಂಬರ್ 24ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.
Wed, 25 Sep 202401:58 AM IST
1971 ರಲ್ಲಿ ತೆರೆ ಕಂಡ ಹರೇ ರಾಮ ಹರೇ ಕೃಷ್ಣ ಚಿತ್ರದ ದಮ್ ಮಾರೋ ದಮ್ ಹಾಡು ನೈಜವಾಗಿ ಬರಲಿ ಎಂದು ತಾನು ನಿಜವಾಗಿಯೂ ನಶೆ ಏರಿಸಿಕೊಂಡಿದ್ದೆ. ಹಿಪ್ಪಿಗಳು ತೆಗೆದುಕೊಳ್ಳುತ್ತಿದ್ದ ಮಾದಕ ದ್ರವ್ಯವನ್ನು ನಾನೂ ಪಡೆದಿದ್ದೆ, ಇದು ನನ್ನ ತಾಯಿಗೆ ಗೊತ್ತಾಗಿ ಕೋಪಗೊಂಡಿದ್ದರು ಎಂದು ಬಾಲಿವುಡ್ ಖ್ಯಾತ ನಟಿ ಜೀನತ್ ಅಮನ್ ಹೇಳಿಕೊಂಡಿದ್ದಾರೆ.
Wed, 25 Sep 202412:57 AM IST
ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 45 ಸಿನಿಮಾ ಸೆಟ್‌ಗೆ ಆನಂದಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ ಅವರು ಭೇಟಿ ನೀಡಿ ಚಿತ್ರತಂಡಕ್ಕೆ ಆಶೀರ್ವಾದ ಮಾಡಿದ್ದಾರೆ.